Sunday, June 7, 2026
Homeಕರಾವಳಿಪುತ್ತೂರು: ಕರು ಮಾರಾಟ ಮಾಡುವ ವಿಚಾರಕ್ಕೆ ಹಲ್ಲೆ: ಆಸ್ಪತ್ರೆ ಸೇರಿದ ಇಬ್ಬರು ಯುವಕರು

ಪುತ್ತೂರು: ಕರು ಮಾರಾಟ ಮಾಡುವ ವಿಚಾರಕ್ಕೆ ಹಲ್ಲೆ: ಆಸ್ಪತ್ರೆ ಸೇರಿದ ಇಬ್ಬರು ಯುವಕರು

- Advertisement -
- Advertisement -

ಪುತ್ತೂರು: ಕರು ಮಾರಾಟ ಮಾಡುವ ವಿಚಾರಕ್ಕೆ ಗಲಾಟೆ ನಡೆದು ಇಬ್ಬರು ಯುವಕರ ಮೇಲೆ ಹಲ್ಲೆ ನಡೆದು ಆಸ್ಪತ್ರೆ ಸೇರಿರುವ ಘಟನೆ ಪುತ್ತೂರಿನ ಕಲ್ಲರ್ಪೆಯಲ್ಲಿ ನಡೆದಿದೆ.

ಆರ್ಯಾಪು ಗ್ರಾ.ಪಂ. ಬಿಜೆಪಿ ಸದಸ್ಯ ಅಶೋಕ್ ನಾಯ್ಕ್ ಮತ್ತು ಅಜಿತ್ ರೈ ಕುರಿಯ ಇವರ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಲಾಗಿದೆ ಎಂದು ಆರೋಪಿಸಲಾಗಿದ್ದು, ಇಬ್ಬರೂ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಜಿತ್ ಎಂಬವರಿಗೆ ರಿಜ್ವಾನ್ ಎಂಬವರು ಮೂರು ತಿಂಗಳ ಕರುವೆಂದು ಒಂದು ತಿಂಗಳ ಕರುವೊಂದನ್ನು ನೀಡಿದ್ದು, ಆ ಕರುವನ್ನು ವಾಪಾಸ್ ತೆಗೆದುಕೊಂಡು ಹೋಗುವಂತೆ ಅಜಿತ್ ಹೇಳಿದ್ದಾರೆ. ಇದೇ ವಿಚಾರಕ್ಕೆ ರಿಜ್ವಾನ್ ಅವರು ಅಜಿತ್ ಅವರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಜೊತೆಗಿದ್ದ ಬಿಜೆಪಿ ಸದಸ್ಯ ಅಶೋಕ್ ನಾಯ್ಕ್ ಅವರ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

- Advertisement -

Latest News

error: Content is protected !!