Friday, June 5, 2026
Homeಕರಾವಳಿಮಂಗಳೂರು: ಟಿಸಿಗಾಗಿ ಅರ್ಜಿ ಸಲ್ಲಿಸಿದ 5 ಜನ ಹಿಜಾಬ್ ಧಾರಿಣಿ ವಿದ್ಯಾರ್ಥಿನಿಯರು

ಮಂಗಳೂರು: ಟಿಸಿಗಾಗಿ ಅರ್ಜಿ ಸಲ್ಲಿಸಿದ 5 ಜನ ಹಿಜಾಬ್ ಧಾರಿಣಿ ವಿದ್ಯಾರ್ಥಿನಿಯರು

- Advertisement -
- Advertisement -

ಮಂಗಳೂರು: ಹಿಜಾಬ್‌ ವಿವಾದ ಉಂಟಾಗಿದ್ದ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ 5 ಮಂದಿ ವಿದ್ಯಾರ್ಥಿನಿಯರು ಟಿಸಿ (ಟ್ರಾನ್ಸ್‌ಫ‌ರ್‌ ಸರ್ಟಿಫಿಕೆಟ್‌)ಗಾಗಿ ಪ್ರಾಂಶುಪಾಲರಿಗೆ ಅರ್ಜಿ ಸಲ್ಲಿಸಿದ್ದಾರೆ.

ಟಿಸಿ ಪಡೆಯಲು 5 ವಿದ್ಯಾರ್ಥಿನಿಯರು ಮುಂದಾಗಿದ್ದಾರೆ ಎಂಬ ಬಗ್ಗೆ ಸುದ್ದಿಯಾಗಿತ್ತಪ.ಆದರೆ ಇದುವರೆಗೂ ನಮಗೆ ಯಾವುದೇ ಅರ್ಜಿ ಬಂದಿಲ್ಲ ಎಂದು ಕಾಲೇಜಿನ ಪ್ರಾಶುಂಪಾಲೆ ಅನುಸೂಯ ಸ್ಪಷ್ಟಪಡಿಸಿದ್ದರು. ಆದರೆ ಈಗ ಐವರು ಟಿಸಿಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಹಿಜಾಬ್‌ ಧರಿಸಿ ತರಗತಿಗೆ ಬರಲು ಅವಕಾಶ ನೀಡದ ಹಿನ್ನೆಲೆಯಲ್ಲಿ 15 ವಿದ್ಯಾರ್ಥಿನಿಯರು ಗೈರು ಹಾಜರಾಗುತ್ತಿದ್ದರು.

ಈ ಪೈಕಿ ಮೂವರು ವಿದ್ಯಾರ್ಥಿನಿಯರು ಪತ್ರಿಕಾಗೋಷ್ಠಿ ನಡೆಸಿ ಕಾಲೇಜಿನ ಶಿಸ್ತು ಉಲ್ಲಂ ಸಿದ ಹಿನ್ನೆಲೆಯಲ್ಲಿ ಪ್ರಾಂಶುಪಾಲರು ಅವರಿಗೆ ಕಾರಣ ಕೇಳಿ ನೋಟಿಸ್‌ ಕಳುಹಿಸಿದ್ದರು.

- Advertisement -

Latest News

error: Content is protected !!