Thursday, June 4, 2026
Homeಉತ್ತರ ಕನ್ನಡಮುರ್ಡೇಶ್ವರದಲ್ಲಿ ಸಮುದ್ರದ ಅಲೆಗೆ ಕೊಚ್ಚಿ ಹೋಗಿ ಯುವಕ ಸಾವು

ಮುರ್ಡೇಶ್ವರದಲ್ಲಿ ಸಮುದ್ರದ ಅಲೆಗೆ ಕೊಚ್ಚಿ ಹೋಗಿ ಯುವಕ ಸಾವು

- Advertisement -
- Advertisement -

ಭಟ್ಕಳ : ಸಮುದ್ರದ ಅಲೆಯಲ್ಲಿ ಕೊಚ್ಚಿ ಹೋಗಿ ಯುವಕ ಸಾವನ್ನಪ್ಪಿದ ಘಟನೆ ಮುರ್ಡೇಶ್ವರದಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ಕಂಚುಕೋಟೆಯ ನಿವಾಸಿ ಮಹೇಶ (33) ಮೃತ ದುರ್ದೈವಿ.

ಮಹೇಶ ಹಾಘೂ ಸ್ನೇಹಿತರು ಸೇರಿಕೊಂಡು ಕಾರಿನಲ್ಲಿ ಬಂದಿದ್ದು ಸಿಗಂದೂರು, ಜೋಗ ಫಾಲ್ಸ್ ಎಲ್ಲಾ ಪ್ರವಾಸ ಮುಗಿಸಿ ಮುರ್ಡೇಶ್ವರಕ್ಕೆ ಬಂದಿದ್ದರು. ಭಾನುವಾರ ಮುರ್ಡೇಶ್ವರ ಸಮುದ್ರದ ನೀರಿನಲ್ಲಿ ಆಟವಾಡುತ್ತಿರುವಾಗ ದೊಡ್ಡ ಅಲೆಯೊಂದು ಬಂದು ಮಹೇಶ ಅವರನ್ನು ಕೊಚ್ಚಿಕೊಂಡು ಹೋಗಿದೆ.

ಸ್ವಲ್ಪ ಹೊತ್ತಿನಲ್ಲಿಯೇ ಮೀನುಗಾರರು  ಅವರನ್ನು ರಕ್ಷಣೆ ಮಾಡಿದರಾದರೂ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿಯೇ ಮೃತ ಪಟ್ಟಿದ್ದಾರೆ.  ಈ ಬಗ್ಗೆ ಮುರ್ಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -

Latest News

error: Content is protected !!