Saturday, June 6, 2026
HomeWorldಕಪ್ಪು ಕೃಷಿ ಕಾಯ್ದೆಯನ್ನು ಪ್ರಧಾನಿ ಹಿಂಪಡೆಯಬೇಕು - ರಾಹುಲ್ ಗಾಂಧಿ ಟ್ವೀಟ್

ಕಪ್ಪು ಕೃಷಿ ಕಾಯ್ದೆಯನ್ನು ಪ್ರಧಾನಿ ಹಿಂಪಡೆಯಬೇಕು – ರಾಹುಲ್ ಗಾಂಧಿ ಟ್ವೀಟ್

- Advertisement -
- Advertisement -

ಕೃಷಿ ಕಾಯ್ದೆಯನ್ನು ವಾಪಸ್ ತೆಗೆದುಕೊಂಡು ರೈತರ ಬಳಿ ಕ್ಷಮೆಯಾಚಿಸಿದಂತೆ ಅಗ್ನಿಪಥವನ್ನೂ ವಾಪಸ್ ತೆಗೆದುಕೊಂಡು ಯುವಕರ ಬಳಿ ಕ್ಷಮೆಯಾಚಿಸಬೇಕು. ಅಗ್ನಿಪಥ್ ನೇಮಕಾತಿ ಯೋಜನೆಯನ್ನು ಹಿಂಪಡೆಯಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸೋಶಿಯಲ್ ಮೀಡಿಯಾ ಮೂಲಕವಾಗಿ ಕಿಡಿಕಾರಿದ್ದಾರೆ.


ಬಿಜೆಪಿ ಸರ್ಕಾರ ಜೈ ಜವಾನ್, ಜೈ ಕಿಸಾನ್ ಮೌಲ್ಯಗಳಿಗೆ ಸತತ 8 ವರ್ಷಗಳಿಂದ ಅಪಮಾನ ಮಾಡಿದೆ. ಕಪ್ಪು ಕೃಷಿ ಕಾಯ್ದೆಯನ್ನು ಪ್ರಧಾನಿ ನರೇಂದ್ರ ಮೋದಿ ಹಿಂಪಡೆಯಬೇಕು ಎಂದು ಈ ಹಿಂದೆಯೂ ಹೇಳಿದ್ದೆ. ಅದೇ ರೀತಿ ಅವರು ‘ಮಾಫಿವೀರ್’ ಆಗುವ ಮೂಲಕ ದೇಶದ ಯುವಕರನ್ನು ಪಾಲಿಸಬೇಕಾಗುತ್ತದೆ.


ಅಗ್ನಿಪಥ್’ ಅನ್ನು ಹಿಂದಕ್ಕೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ರಾಹುಲ್ ಗಾಂಧಿ ಟ್ವಿಟ್ ಮಾಡಿದ್ದಾರೆ.

- Advertisement -

Latest News

error: Content is protected !!