Thursday, June 4, 2026
Homeಕರಾವಳಿಉಡುಪಿಉಡುಪಿ: ಎ.ಜಿ. ಕೊಡ್ಗಿ ನಿಧನಕ್ಕೆ ಸಂತಾಪ ಸೂಚಿಸಿದ ಪೇಜಾವರ ಶ್ರೀಗಳು

ಉಡುಪಿ: ಎ.ಜಿ. ಕೊಡ್ಗಿ ನಿಧನಕ್ಕೆ ಸಂತಾಪ ಸೂಚಿಸಿದ ಪೇಜಾವರ ಶ್ರೀಗಳು

- Advertisement -
- Advertisement -

ಉಡುಪಿ: ಕರಾವಳಿಯ ಭೀಷ್ಮ, ಮಾಜಿ ಶಾಸಕ ಎ ಜಿ ಕೊಡ್ಡಿಯವರ ನಿಧನಕ್ಕೆ ಪೇಜಾವರ ಶ್ರೀಗಳು ಸಂತಾಪ ಸೂಚಿಸಿದ್ದಾರೆ.   ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಲು ಸಾಧ್ಯ ಎಂಬುದಕ್ಕೆ ಉತ್ತಮ ನಿದರ್ಶನವಾಗಿದ್ದರು ಎ ಜಿ ಕೊಡ್ಡಿ. ಗ್ರಾಮ ಸ್ವರಾಜ್ಯದ ಬಗ್ಗೆ ಅವರು ಹೊಂದಿದ್ದ ಅಪರಿಮಿತ ಜ್ಞಾನ ಮತ್ತು ಅಮಾಸೆಬೈಲು ಗ್ರಾಮದ ಏಳಿಗೆಗಾಗಿ ಅವರು ಕೈಗೊಂಡ ಅನೇಕ ಕಾರ್ಯಕ್ರಮಗಳನ್ನು ಗಮನಿಸಿದ್ದೇವೆ. ರಾಜಕೀಯ ಕ್ಷೇತ್ರದಲ್ಲೂ ಉತ್ತಮ ಶಾಸಕರಾಗಿ, ಮತ್ತು ಇತರೆ ವಿಧಗಳಲ್ಲಿ ಅವರ ಧೀಮಂತಿಕೆಯ ಕೊಡುಗೆಗಳು ನಾಡಿಗೆ ಸಂದಿವೆ.

ನಮ್ಮ ಗುರುಗಳ ಬಹುತೇಕ ಎಲ್ಲ ಪರ್ಯಾಯಗಳಲ್ಲೂ ವಿಶೇಷವಾದ ಸೇವೆಯನ್ನು ಅವರು ಸಲ್ಲಿಸಿರುವುದನ್ನು ಸ್ಮರಿಸುತ್ತೇವೆ. ಶ್ರೀ ಮಠದ ವಿಶೇಷ ಭಕ್ತರೂ, ಆತ್ಮೀಯ ಅಭಿಮಾನಿಗಳೂ ಆಗಿದ್ದ ಶ್ರೀಯುತ ಗೋಪಾಲಕೃಷ್ಣ ಕೊಡ್ಡಿಯವರ ಆತ್ಮಕ್ಕೆ ಶ್ರೀಕೃಷ್ಣ ಪರಮಾತ್ಮನು ಸದ್ಗತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಪೇಜಾವರ ಶ್ರೀಗಳು ಸಂತಾಪ ಸೂಚಿಸಿದ್ದಾರೆ.

- Advertisement -

Latest News

error: Content is protected !!