Thursday, October 15, 2026
Homeಕರಾವಳಿಮಂಗಳೂರು: ಹಳೆಯಂಗಡಿ ಜಂಕ್ಷನ್ ಬಳಿ ಟೆಂಪೊ ಢಿಕ್ಕಿ, ಸ್ಕೂಟರ್ ಸವಾರನಿಗೆ ಗಂಭೀರ ಗಾಯ

ಮಂಗಳೂರು: ಹಳೆಯಂಗಡಿ ಜಂಕ್ಷನ್ ಬಳಿ ಟೆಂಪೊ ಢಿಕ್ಕಿ, ಸ್ಕೂಟರ್ ಸವಾರನಿಗೆ ಗಂಭೀರ ಗಾಯ

- Advertisement -
- Advertisement -

ಮಂಗಳೂರು: ಟೆಂಪೊ ಢಿಕ್ಕಿಯಾದ ಪರಿಣಾಮ ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಹಳೆಯಂಗಡಿ ಜಂಕ್ಷನ್ ಬಳಿ ನಡೆದಿದೆ.ಹಳೆಯಂಗಡಿ ಕೊಳುವೈಲು ನಿವಾಸಿ ಬಾಲಕೃಷ್ಣ ಗಾಯಗೊಂಡ ಬೈಕ್ ಸವಾರ.

ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಟೆಂಪೊ ಹಳೆಯಂಗಡಿ ಜಂಕ್ಷನ್ ಬರುತ್ತಿದ್ದಂತೆ ಕಿನ್ನಿಗೋಳಿ ಕಡೆಯಿಂದ ಹೆದ್ದಾರಿ ಕ್ರಾಸ್ ಮಾಡಿ ಹಳೆಯಂಗಡಿ ಒಳಪೇಟೆಗೆ ಹೋಗುತ್ತಿದ್ದ ಸ್ಕೂಟರ್ ಗೆ ಢಿಕ್ಕಿ ಹೊಡೆದಿದೆ.

ಪರಿಣಾಮ ಸ್ಕೂಟರ್ ಸವಾರ ಬಾಲಕೃಷ್ಣ ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಸುರತ್ಕಲ್ ಟ್ರಾಫಿಕ್ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದು ಈ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ.

- Advertisement -

Latest News

error: Content is protected !!