Friday, June 5, 2026
Homeಕರಾವಳಿಉಡುಪಿಉಪ್ಪುಂದ: ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ: ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆ

ಉಪ್ಪುಂದ: ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ: ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆ

- Advertisement -
- Advertisement -

ಉಪ್ಪುಂದ: ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕಂಬದಕೋಣೆ ಮಂಜುನಾಥ ದೇವಾಡಿಗ (38) ಅವರು ಜೂ. 9ರಂದು ಕೆರ್ಗಾಲು ಗ್ರಾಮದ ನಾಯ್ಕನಕಟ್ಟೆ ರಾ.ಹೆ. 66ರ ಬಳಿ ಶವವಾಗಿ ಪತ್ತೆಯಾಗಿದ್ದಾರೆ.ಮಂಜುನಾಥ ದೇವಾಡಿಗ ಜೂ. 6ರ ಬೆಳಗ್ಗೆ ಮನೆಯಿಂದ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋಗಿದ್ದರು. ರಾತ್ರಿ ಮನೆಗೆ ಬಾರದೆ ಇದ್ದಾಗ ಅವರಿಗೆ ಫೋನ್‌ ಕರೆ ಮಾಡಿದರೂ ಸ್ವೀಕರಿಸಿರಲಿಲ್ಲ. ಈ ಬಗ್ಗೆ ಜೂ. 8ರಂದು ಬೈಂದೂರು ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿತ್ತು.

ಜೂ. 9ರಂದು ನಾಯ್ಕನಕಟ್ಟೆಯ ರಾ.ಹೆ. 66ರ ಸಮೀಪ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಮನೆಮಂದಿ ಗುರುತು ಪತ್ತೆ ಮಾಡಿದ್ದಾರೆ. ವಾದ್ಯ ಹಾಗೂ ಕೂಲಿ ಕೆಲಸ ಮಾಡಿಕೊಂಡಿದ್ದ ಮಂಜುನಾಥ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಮೂರು ದಿನಗಳ ಹಿಂದೆ ಮಂಜುನಾಥ ಅವರು ಕಾಣೆಯಾದಾಗ ಅವರ ಪತ್ನಿ ಮನೆಯವರು ದೈವದ ಬಳಿ ಕಾಣೆಯಾದ ಬಗ್ಗೆ ಕೇಳಿದಾಗ “ಅವನು ನನ್ನ ಸರಹದ್ದಿನಲ್ಲಿಯೇ ಇದ್ದು, ಇನ್ನೆರಡು ದಿನದಲ್ಲಿ ಸಿಗುವಂತೆ ಮಾಡುವುದಾಗಿ ನುಡಿದಿತ್ತು. ದೈವದ ನುಡಿ ನಿಜವಾಯಿತು ಎಂದು ಜನರಾಡಿಕೊಳ್ಳುತ್ತಿದ್ದಾರೆ.ಬೈಂದೂರು ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 ಬೈಂದೂರು ವೃತ್ತ ನಿರೀಕ್ಷಕ ಸಂತೋಷ್‌ ಕಾಯ್ಕಿಣಿ, ಠಾಣಾಧಿಕಾರಿ ಪವನ ಕುಮಾರ ನಾಯ್ಕ ಸ್ಥಳಕ್ಕೆ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!