Wednesday, June 3, 2026
Homeಕರಾವಳಿವಿದ್ಯಾರ್ಥಿನಿ ಜೊತೆಗಿನ ತನ್ನ ಅಶ್ಲೀಲ ಫೋಟೋಗಳನ್ನು ಸ್ಟೇಟಸ್ ಹಾಕಿದ ಶಿಕ್ಷಕ: ಮದುವೆ ನಿಲ್ಲಿಸಲು ಹೋಗಿ ಜೈಲು...

ವಿದ್ಯಾರ್ಥಿನಿ ಜೊತೆಗಿನ ತನ್ನ ಅಶ್ಲೀಲ ಫೋಟೋಗಳನ್ನು ಸ್ಟೇಟಸ್ ಹಾಕಿದ ಶಿಕ್ಷಕ: ಮದುವೆ ನಿಲ್ಲಿಸಲು ಹೋಗಿ ಜೈಲು ಸೇರಿದ ಅಧ್ಯಾಪಕ

- Advertisement -
- Advertisement -

ಬೆಳಗಾವಿ: ಶಿಕ್ಷಕನೋರ್ವ ವಿದ್ಯಾರ್ಥಿನಿ ಜೊತೆಗಿನ ತನ್ನ ಅಶ್ಲೀಲ ಫೋಟೋಗಳನ್ನು ಸ್ಟೇಟಸ್ ಹಾಕಿ ವಿದ್ಯಾರ್ಥಿನಿಯ ಮದುವೆ ನಿಲ್ಲಿಸಲು ಯತ್ನಿಸಿ, ಇದೀಗ ಜೈಲು ಪಾಲಾಗಿರುವ ಘಟನೆ ಬೆಳಗಾವಿ ಜಿಲ್ಲೆ ಸವದತ್ತಿಯಲ್ಲಿ ನಡೆದಿದೆ.

ಸವದತ್ತಿ ತಾಲೂಕಿನ ಗ್ರಾಮವೊಂದರ ಪ್ರೌಢ ಶಾಲಾ ಶಿಕ್ಷಕ ಮಹೇಶ್ (44) ವಿರುದ್ಧ ವಿದ್ಯಾರ್ಥಿನಿ ಪೋಷಕರು ಪೋಕ್ಸೋ ಕಾಯ್ದೆ ಅಡಿ ಸವದತ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಆರೋಪಿ ದೈಹಿಕ ಶಿಕ್ಷಕ ವಿದ್ಯಾರ್ಥಿನಿ ಶಾಲೆಗೆ ಬರುತ್ತಿದ್ದ ವೇಳೆ ಮದುವೆಯಾಗುವುದಾಗಿ ನಂಬಿಸಿ, ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಜೊತೆಗೆ ವಿದ್ಯಾರ್ಥಿನಿ ಜೊತೆಗಿನ ಅಶ್ಲೀಲ ಫೋಟೋಗಳನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾನೆ.

ವಿದ್ಯಾರ್ಥಿನಿಗೆ ಈಗ ಬೇರೆ ಯುವಕನೊಂದಿಗೆ ಮದುವೆ ನಿಗದಿಯಾಗಿತ್ತು. ಆದ್ದರಿಂದ ಯುವತಿಯ ಅಶ್ಲೀಲ ಫೋಟೋ ಈತ ಸ್ಟೇಟಸ್ ಹಾಕಿದ್ದಾನೆ‌. ಇದನ್ನು ಕಂಡ ಜನ ಶಿಕ್ಷಕನಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

- Advertisement -

Latest News

error: Content is protected !!