Saturday, May 4, 2024
Homeತಾಜಾ ಸುದ್ದಿಅದ್ಧೂರಿಯಾಗಿ ಸಪ್ತಪದಿ ತುಳಿದ ಖ್ಯಾತ ಜೋಡಿ: ನಯನತಾರಾ ಮತ್ತು ವಿಘ್ನೇಶ್​ ಶಿವನ್ ವಿವಾಹಕ್ಕೆ ಸಾಕ್ಷಿಯಾದ ಸ್ಟಾರ್...

ಅದ್ಧೂರಿಯಾಗಿ ಸಪ್ತಪದಿ ತುಳಿದ ಖ್ಯಾತ ಜೋಡಿ: ನಯನತಾರಾ ಮತ್ತು ವಿಘ್ನೇಶ್​ ಶಿವನ್ ವಿವಾಹಕ್ಕೆ ಸಾಕ್ಷಿಯಾದ ಸ್ಟಾರ್ ಗಳು

spot_img
- Advertisement -
- Advertisement -

ಚೆನ್ನೈ: ದಕ್ಷಿಣ ಭಾರತದ ಬಹುಬೇಡಿಕೆಯ ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್​ ಶಿವನ್ ಇಂದು ಹಿಂದೂ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟದ್ದಾರೆ. ಮದ್ವೆ ಸಂಭ್ರಮದ ಫೋಟೋಗಳು ರಿವೀಲ್​ ಆಗಿದ್ದು, ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಮಹಾಬಲಿಪುರಂನ ರೆಸಾರ್ಟ್​ನಲ್ಲಿ ನಡೆದ ನಯನತಾರಾ ಅವರ ಮದುವೆಯಲ್ಲಿ ಶಾರುಖ್ ಖಾನ್, ರಜಿನಿಕಾಂತ್, ವಿಜಯ್ ಸೇತುಪತಿ, ತಲಾ ಅಜಿತ್, ಸೂರ್ಯ ಸೇರಿದಂತೆ ಅನೇಕ ಗಣ್ಯರು, ಕುಟುಂಬದ ಆಪ್ತರು ಮತ್ತು ಸ್ನೇಹಿತರು ಪಾಲ್ಗೊಂಡಿದ್ದರು.

ಈ ಮದುವೆಗೆ ಮಾಧ್ಯಮದವರಿಗೆ ನಿರ್ಬಂಧ ಹೇರಲಾಗಿತ್ತು. ಈ ಮದುವೆಯ ದೃಶ್ಯ ಪ್ರಸಾರದ ಹಕ್ಕನ್ನ 10 ಕೋಟಿ ರೂ.ಗೆ ಈ ಜೋಡಿ ಸೇಲ್ ಮಾಡಿದೆ ಎನ್ನಲಾಗಿದೆ. ನವಜೋಡಿಯ ಫೋಟೋ ವೈರಲ್​ ಆಗಿದೆ. ಪ್ರಭುದೇವ ಮತ್ತು ಸಿಂಬು ಜೊತೆಗಿನ ಅಫೇರ್‌ನಿಂದ ಸುದ್ದಿಯಾಗಿದ್ದ ನಯನತಾರಾ, ತನಗಿಂತ ಒಂದು ವರ್ಷ ಚಿಕ್ಕವರಾದ ವಿಘ್ನೇಶ್​ರನ್ನು ಕೈಹಿಡಿದಿದ್ದಾರೆ. ವಿಘ್ನೇಶ್​ ಮತ್ತು ನಯನತಾರಾ ಅವರ ಮದುವೆ ಮೊದಲಿಗೆ ತಿರುಪತಿ ತಿರುಮಲ ದೇವಸ್ಥಾನದಲ್ಲಿ ನಡೆಯಲಿದೆ ಎಂದು ಹೇಳಲಾಗಿತ್ತು. ಕೊನೇ ಹಂತದಲ್ಲಿ ಸ್ಥಳ ಬದಲಾವಣೆ ಆಗಿದ್ದು, ತಿರುಪತಿ ಬದಲು ಮಹಾಬಲಿಪುರಂನ ರೆಸಾರ್ಟ್​ನಲ್ಲಿ ಮದುವೆ ನಡೆಯಿತು.

- Advertisement -
spot_img

Latest News

error: Content is protected !!