Friday, June 5, 2026
Homeತಾಜಾ ಸುದ್ದಿಕೆಇಆರ್ ಸಿ ಅಧ್ಯಕ್ಷರಾಗಿ ರಾಜ್ಯ ಸರ್ಕಾರದ ನಿವೃತ್ತ ಸಿಎಸ್ ಪಿ. ರವಿಕುಮಾರ್ ನೇಮಕ

ಕೆಇಆರ್ ಸಿ ಅಧ್ಯಕ್ಷರಾಗಿ ರಾಜ್ಯ ಸರ್ಕಾರದ ನಿವೃತ್ತ ಸಿಎಸ್ ಪಿ. ರವಿಕುಮಾರ್ ನೇಮಕ

- Advertisement -
- Advertisement -

ಬೆಂಗಳೂರು: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷರಾಗಿ ನಿವೃತ್ತ ಐಎಎಸ್ ಅಧಿಕಾರಿ ಪಿ. ರವಿಕುಮಾರ್ ನೇಮಕವಾಗಿದ್ದಾರೆ.

ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿಯಾಗಿರುವ ರವಿಕುಮಾರ್ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮುಖ್ಯ ಕಾರ್ಯದರ್ಶಿ ಹುದ್ದೆಯಿಂದ ಮೇ ಮೂವತ್ತಂದರಂದು ಪಿ. ರವಿಕುಮಾರ್ ಸೇವಾ ನಿವೃತ್ತಿ ಹೊಂದಿದ್ದರು.

ರವಿಕುಮಾರ್ ಇನ್ನು ಐದು ವರ್ಷಗಳ ಕಾಲ ಕೆಇಆರ್ ಸಿ ಅಧ್ಯಕ್ಷ ಅಧಿಕಾರ ಅವಧಿ ಹೊಂದಿರಲಿದ್ದಾರೆ. ರಾಜ್ಯದ ಎಲ್ಲಾ ಎಸ್ಕಾಂಗಳು ವಿದ್ಯುತ್ ದರ ನಿಗದಿಪಡಿಸುವ ಮತ್ತು ಏರಿಕೆ ಮಾಡುವ ಸಂಬಂಧ ಕರ್ನಾಟಕ ರಾಜ್ಯ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಬೇಕಿದೆ.

- Advertisement -

Latest News

error: Content is protected !!