Monday, June 15, 2026
Homeಕರಾವಳಿಕರಾವಳಿಯಲ್ಲಿ ಮತ್ತೊಮ್ಮೆ ಸ್ಯಾಟಲೈಟ್ ಫೋನ್ ಆಕ್ಟೀವ್!

ಕರಾವಳಿಯಲ್ಲಿ ಮತ್ತೊಮ್ಮೆ ಸ್ಯಾಟಲೈಟ್ ಫೋನ್ ಆಕ್ಟೀವ್!

- Advertisement -
- Advertisement -

ಮಂಗಳೂರು: ಕರಾವಳಿ ಭಾಗದಲ್ಲಿ ಮತ್ತೊಮ್ಮೆ ಸ್ಯಾಟಲೈಟ್ ಫೋನ್ ಆಕ್ಟೀವ್ ಆಗಿರುವ ಮಾಹಿತಿ ಲಭ್ಯವಾಗಿದೆ. ಕರಾವಳಿ ಜಿಲ್ಲೆಗಳ ಮೂರು ಸ್ಥಳಗಳಲ್ಲಿ ಮತ್ತು ಚಿಕ್ಕಮಗಳೂರಿನ ಅರಣ್ಯ ಪ್ರದೇಶದಿಂದ ಸ್ಯಾಟಲೈಟ್ ಫೋನ್ ಮೂಲಕ ಸಂಪರ್ಕ ಸಾಧಿಸಿರುವ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ಸಂಗ್ರಹಿಸಿದೆ.

ಕಳೆದ 10 ದಿನಗಳ ಅವಧಿಯಲ್ಲಿ 4 ಕಡೆಗಳಿಂದ ಸಂಪರ್ಕ ಸಾಧಿಸಿದ್ದು, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ- ಶಿರಸಿ ಮಧ್ಯೆ ಇರುವ ದಟ್ಟಾರಣ್ಯ ಪ್ರದೇಶ,‌ ಮಂಗಳೂರು ನಗರ ಹೊರಭಾಗದ ನಾಟೇಕಲ್ ಮತ್ತು ಕುಳಾಯಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಡೂರು – ಬೀರೂರು ನಡುವಿನ ಅರಣ್ಯ ಪ್ರದೇಶದಲ್ಲಿ ಸ್ಯಾಟಲೈಟ್ ಫೋನ್ ಮೂಲಕ ಸಂಪರ್ಕ ಸಾಧಿಸಿರುವುದನ್ನು ಬಗ್ಗೆ ಗುಪ್ತಚರ ಇಲಾಖೆ ಪತ್ತೆ ಮಾಡಿದೆ.

ಮೇ 23ರಿಂದ ಮೇ 29ರ ನಡುವೆ ಸ್ಯಾಟಲೈಟ್ ಫೋನ್ ಮೂಲಕ ದಟ್ಟಾರಣ್ಯ ಪ್ರದೇಶಗಳಲ್ಲಿ ಸಂಪರ್ಕ‌ ಸಾಧಿಸಲ್ಪಟ್ಟಿದ್ದು, ಸ್ಯಾಟಲೈಟ್ ಫೋನ್ ಲೊಕೇಶನ್ ಅನ್ನು ಗುಪ್ತಚರ ಏಜೆನ್ಸಿಗಳು ಪತ್ತೆ ಹಚ್ಚಿವೆ.‌

- Advertisement -

Latest News

error: Content is protected !!