Monday, June 8, 2026
Homeತಾಜಾ ಸುದ್ದಿಮಹಿಳೆಯೊಬ್ಬರಿಗೆ ಅಪರಿಚಿತ ನಂಬರ್‌ಗಳಿಂದ ಅಶ್ಲೀಲ ವಿಡಿಯೋ ರವಾನೆ

ಮಹಿಳೆಯೊಬ್ಬರಿಗೆ ಅಪರಿಚಿತ ನಂಬರ್‌ಗಳಿಂದ ಅಶ್ಲೀಲ ವಿಡಿಯೋ ರವಾನೆ

- Advertisement -
- Advertisement -

ಶಿವಮೊಗ್ಗ: ಇಲ್ಲಿನ ಮಹಿಳೆಯೊಬ್ಬರ ಮೊಬೈಲ್‌ಗೆ ಅಪರಿಚಿತ ನಂಬರ್‌ಗಳಿಂದ ಅಶ್ಲೀಲ ವಿಡಿಯೋಗಳು ಬಂದಿದೆ. ಜೊತೆಗೆ ನಿರಂತರವಾಗಿ ಕರೆ ಮಾಡಿದ ಅಪರಿಚಿತರು ಅಸಭ್ಯವಾಗಿ ಮಾತಾಡಿ ಕಿರುಕುಳ ಕೊಟ್ಟಿದ್ದಾರೆ. ಈ ಘಟನೆಯಿಂದ ನೊಂದ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಅಪರಿಚಿತರ ಮೊಬೈಲ್‌ನ ಜಾಡು ಹಿಡಿದು ಹೊರಟ ಪೊಲೀಸರು ಫಜೀತಿಯಾಗಿದೆ ಸಿಲುಕ್ಕಿದ್ದಾರೆ.

ಈ ವಿಚಾರಣೆ ಕುರಿತು ತನಿಖೆ ನಡೆಸಿದ ಪೊಲೀಸರು ಅಶ್ಲೀಲ ವಿಡಿಯೋಗಳನ್ನು ಕಳುಹಿಸಲಾದ ನಂಬರ್‌ಗಳನ್ನು ಪತ್ತೆ ಮಾಡಿದ್ದು, ಉತ್ತರ ಕನ್ನಡ ಜಿಲ್ಲೆಯ ವ್ಯಕ್ತಿಗಳ ಹೆಸರಿನಲ್ಲಿರುವುದು ಗೊತ್ತಾಗಿದೆ. ರಿಪ್ಪನ್‌ಪೇಟೆ ಪಟ್ಟಣದ ಗವಟೂರು ಬಡಾವಣೆ ಮಹಿಳೆಯ ಮೊಬೈಲ್‌ಗೆ ಮೇ 10ರಂದು ಎರಡು ಅಪರಿಚಿತ ಮೊಬೈಲ್ ನಂಬರ್‌ನಿಂದ ಅಶ್ಲೀಲ ವಿಡಿಯೋಗಳು ಕಳುಹಿಸಿದ ದುಷ್ಕರ್ಮಿಗಳು, ನಿರಂತರವಾಗಿ ಕರೆ ಮಾಡಿ ಮಾನಸಿಕ ಕಿರುಕುಳ ನೀಡಿದ್ದಾರೆ. 

ಇದರಿಂದ ಬೇಸತ್ತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಸಿದ ಪೊಲೀಸರು ಅಶ್ಲೀಲ ವಿಡಿಯೋಗಳನ್ನು ಕಳುಹಿಸಲಾದ ನಂಬರ್ ಜಾಡು ಹಿಡಿದು ಹೊರಟಿದ್ದರು. ಆದರೆ ಆ ವಿಳಾಸದಲ್ಲಿರುವ ವ್ಯಕ್ತಿಗಳು ಮಹಿಳೆಗೆ ಬಂದಿರುವ ನಂಬರ್ ಅನ್ನು ಉಪಯೋಗಿಸುತ್ತಿಲ್ಲ ಎಂದು ತಿಳಿದುಬಂದಿದೆ. ಹೀಗಾಗಿ ಕಿಡಿಗೇಡಿಗಳನ್ನು ಪತ್ತೆ ಮಾಡುವುದು ಪೊಲೀಸರಿಗೆ ಸವಾಲಾಗಿದೆ.

- Advertisement -

Latest News

error: Content is protected !!