Friday, June 5, 2026
Homeತಾಜಾ ಸುದ್ದಿ2 ವರ್ಷದ ಕಂದಮ್ಮನ ಮೇಲೆ ದೊಡ್ಡಪ್ಪನಿಂದಲೇ ಅತ್ಯಾಚಾರ

2 ವರ್ಷದ ಕಂದಮ್ಮನ ಮೇಲೆ ದೊಡ್ಡಪ್ಪನಿಂದಲೇ ಅತ್ಯಾಚಾರ

- Advertisement -
- Advertisement -

ಚನ್ನಪಟ್ಟಣ: 2 ವರ್ಷದ ಹಸುಳೆಯ ಮೇಲೆ ಕಾಮುಕ ದೊಡ್ಡಪ್ಪನೇ ಅತ್ಯಾಚಾರವೆಸಗಿದ ಹೀನ ಕೃತ್ಯ ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ನಡೆದಿದೆ.

ಅತ್ಯಾಚಾರವೆಸಗಿದ ಆರೋಪಿಯನ್ನು ಸಾದಿರ್(28) ಎಂದು ಗುರುತಿಸಲಾಗಿದೆ. ಗುರುವಾರ ಮಧ್ಯಾಹ್ನ ಸಹೋದರನ ಮನೆಗೆ ಬಂದ ಸಾದಿರ್, ಚಾಕೋಲೇಟ್ ಕೊಡಿಸುವುದಾಗಿ ತನ್ನ ಮನೆಗೆ ಪುಟ್ಟ ಕಂದಮ್ಮನನ್ನು ಕರೆದುಕೊಂಡು ಹೋಗಿದ್ದನು. ತಡರಾತ್ರಿಯಾದರೂ ಮಗುವನ್ನು ಮನೆಗೆ ಕರೆದುಕೊಂಡು ಬಾರದ ಕಾರಣ ಆತನಿಗೆ ಕರೆ ಮಾಡಿದ ಪೋಷಕರು ಮಗು ಕರೆದುಕೊಂಡು ಬರುವಂತೆ ತಿಳಿಸಿದ್ದರು.

ಸುಮಾರು 12 ಗಂಟೆಯ ವೇಳೆಗೆ ಮಗುವನ್ನು ವಾಪಸ್ ಕರೆದುಕೊಂಡು ಬಂದಿದ್ದ  ಸಾದೀರ್. ಆದರೆ ಮಗುವಿನ ಮೇಲೆ ರಕ್ತದ ಕಲೆ, ಗಾಯದ ಗುರುತುಗಳನ್ನು ನೋಡಿ ಗಾಬರಿಯಾದ ಪೋಷಕರು ಕೂಡಲೇ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಆರೋಪಿಯನ್ನು ಚನ್ನಪಟ್ಟಣ ಪೂರ್ವ ಠಾಣೆ ಪೊಲೀಸರು ಬಂಧಿಸಿದ್ದಾರೆ.

- Advertisement -

Latest News

error: Content is protected !!