Monday, June 8, 2026
Homeಕೊಡಗುಮಡಿಕೇರಿಯಲ್ಲಿ ಯುವತಿ ಅಪಹರಣ ವದಂತಿ: ಇನ್ನೋವಾ ಕಾರಿನಲ್ಲಿ ಯುವತಿಯನ್ನು ಎಳೆದೊಯ್ದ ಬಗ್ಗೆ ಪೊಲೀಸರಿಗೆ ಮಾಹಿತಿ

ಮಡಿಕೇರಿಯಲ್ಲಿ ಯುವತಿ ಅಪಹರಣ ವದಂತಿ: ಇನ್ನೋವಾ ಕಾರಿನಲ್ಲಿ ಯುವತಿಯನ್ನು ಎಳೆದೊಯ್ದ ಬಗ್ಗೆ ಪೊಲೀಸರಿಗೆ ಮಾಹಿತಿ

- Advertisement -
- Advertisement -

ಮಡಿಕೇರಿ: ಮಡಿಕೇರಿ ನಗರದಲ್ಲಿ ಯುವತಿಯೊಬ್ಬಳನ್ನು ಕಿಡ್ನ್ಯಾಪ್ ಮಾಡಲಾಗಿದೆ ಎಂಬ ವಿಚಾರ ಆತಂಕ ಸೃಷ್ಟಿಸಿದೆ. ಮಡಿಕೇರಿ‌ ನಗರದಹೊರವಲಯದ ಕಮಾನು ಗೇಟ್ ಬಳಿ ಘಟನೆ ನಡೆದಿದ್ದು, ಯುವತಿಯೊಬ್ಬಳನ್ನು ಇನ್ನೋವಾ ಕಾರಿನಲ್ಲಿ ಬಲವಂತದಿಂದ ಎಳೆದು ಹಾಕಿಕೊಂಡು ಪರಾರಿಯಾಗಿದ್ದಾರೆ ಎಂದು‌ ಹೇಳಲಾಗಿದೆ.

ಮೂವರು ಯುವಕರು ಮತ್ತು ಓರ್ವ ಯುವತಿಯಿಂದ‌ ಕೃತ್ಯ ನಡೆದಿದೆ ಎನ್ನಲಾಗಿದ್ದು, ಅಂಗಡಿ ಬಳಿ ಯುವತಿ ಬಂದಿದ್ದ ಏಕಾಂಗಿಯಾಗಿ ಬಂದಿದ್ದ ವೇಳೆ ಅಪಹರಣ ಮಾಡಲಾಗಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಸ್ಥಳೀಯರಿಂದ ಮಡಿಕೇರಿ ನಗರ ಪೊಲೀಸರಿಗೆ ಮಾಹಿತಿ ನೀಡಲ್ಪಟ್ಟಿದ್ದು, ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

ಮಡಿಕೇರಿಯಿಂದ‌ ಮೈಸೂರು ರಸ್ತೆಯಲ್ಲಿ ಕಾರು ತೆರಳಿದ್ದು, ಸುಂಟಿಕೊಪ್ಪ ಮತ್ತು ಕುಶಾಲನಗರದಲ್ಲಿ ನಾಕಾಬಂಧಿ ಹಾಕಲಾಗಿದೆ. ಘಟನೆ ಸಂಬಂಧ ಸಿಸಿ ಟಿವಿ ದೃಶ್ಯಾವಳಿಗಳನ್ನು ಮಡಿಕೇರಿ ನಗರ ಪೊಲೀಸರು ಪರಿಶೀಲಿಸುತ್ತಿದ್ದಾರೆ.

- Advertisement -

Latest News

error: Content is protected !!