Tuesday, May 14, 2024
Homeತಾಜಾ ಸುದ್ದಿಜೂನ್ 3ರಿಂದ ಕೆಜಿಎಫ್-2 ಸಿನಿಮಾ ಒಟಿಟಿಯಲ್ಲಿ; ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್‌ ಡೇಟ್ ಫಿಕ್ಸ್

ಜೂನ್ 3ರಿಂದ ಕೆಜಿಎಫ್-2 ಸಿನಿಮಾ ಒಟಿಟಿಯಲ್ಲಿ; ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್‌ ಡೇಟ್ ಫಿಕ್ಸ್

spot_img
- Advertisement -
- Advertisement -

ರಾಕಿಂಗ್ ಸ್ಟಾರ್ ಯಶ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ಬಂದ ಕೆಜಿಎಫ್-2 ಸಿನಿಮಾ ಇದೀಗ ಒಟಿಟಿಯಲ್ಲಿ ಸ್ಟ್ರೀಮಿಂಗ್‌ (OTT Streaming ) ಸಜ್ಜಾಗಿದೆ. ಈಗಾಗಲೇ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿರುವ ಕೆಜಿಎಫ್-2 ಇದೀಗ ಒಟಿಟಿಯಲ್ಲೂ ದಾಖಲೆ ಬರೆಯಲು ಸಿದ್ಧವಾಗಿದೆ.


ಕೋಟಿ ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಕೆಜಿಎಫ್-2 ಸಿನಿಮಾ ಇದೀಗ ಒಟಿಟಿಗೆ ಎಂಟ್ರಿ ಕೊಡುತ್ತಿದೆ.


ಕೆಜಿಎಫ್-2 ಸಿನಿಮಾ ಜೂನ್ 3ರಿಂದ ಒಟಿಟಿಯಲ್ಲಿ ಸ್ಟ್ರೀಮಿಂಗ್ ಪ್ರಾರಂಭ ಮಾಡಲಿದೆ. ಅಂದಹಾಗೆ ಒಟಿಟಿಗಳ ದೈತ್ಯಗಳಲ್ಲಿ ಒಂದಾಗಿರುವ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ(Amazon Prime Video) ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಅಮೆಜಾನ್ ಪ್ರೈಮ್ ಚಂದಾದರರಾಗಿರುವರು ಕೆಜಿಎಫ್-2 ಸಿನಿಮಾವನ್ನು ಮೊಬೈಲ್‌ನಲ್ಲಿಯೇ ವೀಕ್ಷಿಸಬಹುದು. ಅಂದಹಾಗೆ ಕೆಜಿಎಫ್-2 ಈಗಾಗಲೇ ಒಟಿಟಿಯಲ್ಲಿ ವೀಕ್ಷಿಸಲು ಲಭ್ಯವಿತ್ತು. ಆದರೆ ಹಣ ಕೊಟ್ಟು ವೀಕ್ಷಿಸಬೇಕಿತ್ತು. ಇದೀಗ ಉಚಿತ ವೀಕ್ಷಣಗೆ ಲಭ್ಯವಾಗುತ್ತಿದೆ.


ಈ ಮೂಲಕ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಲು ಸಾಧ್ಯವಾಗದೇ ಇರುವವರು ಹಾಗೂ ಮತ್ತೆ ಮತ್ತೆ ಸಿನಿಮಾ ನೋಡಬೇಕು ಎಂದುಕೊಂಡವರು ಒಟಿಟಿಯಲ್ಲಿ ನೋಡಿ ಆನಂದಿಸಬಹುದು. ಅಂದಹಾಗೆ ಕೆಜಿಎಫ್-2 ದಕ್ಷಿಣ ಭಾರತದ ಎಲ್ಲಾ ಭಾಷೆ ಮತ್ತು ಹಿಂದಿಯಲ್ಲೂ ತೆರೆಗೆ ಬಂದಿದೆ. ಸದ್ಯ ಒಟಿಟಿಯಲ್ಲೂ ಎಲ್ಲಾಭಾಷೆಯಲ್ಲೂ ಸಿನಿಮಾ ಲಭ್ಯವಿರಲಿದೆ. ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ ಒಟ್ಟು 5 ಭಾಷೆಗಳಲ್ಲಿದ್ದು ಆಯಾಯ ಭಾಷೆಯ ಪ್ರೇಕ್ಷಕರು ಅವರ ಭಾಷೆಯಲ್ಲಿ ಸಿನಿಮಾ ವೀಕ್ಷಿಸಬಹುದು.

- Advertisement -
spot_img

Latest News

error: Content is protected !!