ಕೃತಿ ಶೆಟ್ಟಿ ಕನ್ನಡದ ಮುದ್ದು ಮುಖದ ಹುಡುಗಿ,ಸದ್ಯಕ್ಕೆ ಟಾಲಿವುಡ್ನಲ್ಲಿ ಭಾರೀ ಬೇಡಿಕೆ ಇರುವ ನಟಿ..ಕೃತಿ ಶೆಟ್ಟಿಗೆ ಅದಾಗಲೇ ಅಭಿಮಾನಿ ಬಳಗ ಕೂಡ ಹುಟ್ಟಿಕೊಂಡಿದೆ. ಇದೀಗ ಇವರು ವೇದಿಕೆ ಮೇಲೆ ಗಳ ಗಳನೇ ಕಣ್ಣೀರಿಟ್ಟಿದ್ದು ಭಾರೀ ಸುದ್ದಿಯಾಗಿದೆ.
ಹೌದು ಸಂದರ್ಶನವೊಂದರಲ್ಲಿನ ಇದ್ದಕಿದ್ದ ಹಾಗೇ ನಟಿ ಕೃತಿ ಶೆಟ್ಟಿ ಬಿಕ್ಕಿ, ಬಿಕ್ಕಿ ಕಣ್ಣೀರಿಟ್ಟಿದ್ದಾರೆ. ತಮಿಳಿನ ವಾಡ ಪೋಚೆ ಕಾರ್ಯಕ್ರಮದಲ್ಲಿ ನಟಿ ಕೃತಿ ಶೆಟ್ಟಿ ಭಾಗಿಯಾಗಿದ್ದರು. ಈ ಸಂದರ್ಶನದಲ್ಲಿ ಸದಾ ಇಬ್ಬರು ನಿರೂಪಕರಾಗಿರುತ್ತಾರೆ. ಇಬ್ಬರೂ ಕೂಡ ನಟಿ ಕೃತಿ ಶೆಟ್ಟಿ ಅವರನ್ನು ಪ್ರಶ್ನೆಗಳನ್ನು ಕೇಳಿದ್ದಾರೆ. ಇದ್ದಕ್ಕಿದ್ದ ಹಾಗೇ ನಿರೂಪಕರ ನಡುವೆ ಜಗಳ ಶುರುವಾಗಿದೆ. ನೋಡ ನೋಡತ್ತಲೇ ಈ ಗಲಾಟೆ ಜೋರಾಗಿದೆ. ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ತನ್ನ ಕಣ್ಣ ಮುಂದೆ ಹೀಗೆ ಆಗಿದ್ದನ್ನು ಕಂಡ ಕೃತಿ ಶೆಟ್ಟಿ ಶಾಕ್ಗೆ ಒಳಗಾಗಿದ್ದಾರು. ಇವರ ಜಗಳ ನೋಡಿ ಕೃತಿಗೆ ಗಳ ಗಳನೇ ಕಣ್ಣೀರಿಟ್ಟಿದ್ದಾರೆ.
ಹೌದು, ಕಾರ್ಯಕ್ರಮ ಮಧ್ಯೆಯಲ್ಲಿ ಗಲಾಟೆ ಶುರು ಮಾಡಿದ ಆ್ಯಂಕರ್ಸ್ ಕಂಡು ಕೃತಿ ಶೆಟ್ಟಿ ಅಳಲು ಶುರು ಮಾಡಿದ್ದಾರೆ. ಇದನ್ನು ಕಂಡ ನಿರೂಪಕರು ಕೊನೆಗೂ ನಿಜ ಹೇಳಿದ್ದಾರೆ. ಇದು ಕೇವಲ ತಮಾಷೆಗಾಗಿ ಮಾಡುತ್ತಿದ್ದೇವೆ. ಇದು ಸೀರಿಯಸ್ ಅಲ್ಲ ಎಂದು ಹೇಳಿದ್ದಾರೆ. ಇದು ತಮಾಷೆಗಾಗಿ ಮಾಡಿದ್ದು ಎಂದು ನಿರೂಪಕರು ಹೇಳಿದ್ರೂ ಕೃತಿಗೆ ಅಳು ತಡೆಯಲು ಸಾಧ್ಯವಾಗುವುದಿಲ್ಲ. ಈ ರೀತಿ ಜೋರಾಗಿ ಜಗಳ ಆಡಿದರೆ ನನಗೆ ಆಗೋದಿಲ್ಲ” ಅಂತ ಕೊನೆಗೆ ಕೃತಿ ಶೆಟ್ಟಿ ಹೇಳಿದ್ದಾರೆ..