Friday, June 5, 2026
Homeಕರಾವಳಿಸಾವಿನಲ್ಲೂ ಸಾರ್ಥಕತೆ ಮೆರೆದ ಪುತ್ತೂರಿನ ವ್ಯಕ್ತಿ: ತನ್ನೆರಡು ಕಣ್ಣುಗಳನ್ನು ದಾನ ಮಾಡಿ ಇನ್ನೊಬ್ಬರ ಬಾಳು ಬೆಳಗಿಸಿದ...

ಸಾವಿನಲ್ಲೂ ಸಾರ್ಥಕತೆ ಮೆರೆದ ಪುತ್ತೂರಿನ ವ್ಯಕ್ತಿ: ತನ್ನೆರಡು ಕಣ್ಣುಗಳನ್ನು ದಾನ ಮಾಡಿ ಇನ್ನೊಬ್ಬರ ಬಾಳು ಬೆಳಗಿಸಿದ ರಿಯಲ್ ಹೀರೋ

- Advertisement -
- Advertisement -

ಪುತ್ತೂರು: ಇಲ್ಲಿನ ಬಡಗನ್ನೂರು ನಿವಾಸಿ ರಾಮ ಪಾಟಾಳಿ ಎಂಬವರ ಪುತ್ರ ದಯಾನಂದ (40) ಎಂಬವರು ಬೆನ್ನು ಮೂಳೆ ಮುರಿತಕ್ಕೆ ಒಳಗಾಗಿ ಕಳೆದ 16 ವರ್ಷದಿಂದ ಮನೆಗಿದಲ್ಲೇ ಇದ್ದರು. ಇದೀಗ ಅವರು ಸಾವನ್ನಪ್ಪಿದ್ದು ಸಾವಿನ ವೇಳೆ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ.

ಸಾವಿಗಿಂತ ಮೊದಲು ದಯಾನಂದ ಅವರು ತಮ್ಮ ಕಣ್ಣುಗಳನ್ನು ದಾನ ಮಾಡಬೇಕು ಎಂದು ಮನೆಯವರಲ್ಲಿ ತಿಳಿಸಿದ್ದರು ಎನ್ನಲಾಗಿದೆ. ಅದರಂತೆ ಅವರು ಮರಣ ಹೊಂದುತ್ತಿದ್ದಂತೆ ಅವರ ನೇತ್ರದಾನ ಮಾಡಲಾಗಿದೆ. ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯರು ಬಂದು ಕಣ್ಣುಗಳ ದಾನ ಪ್ರಕ್ರಿಯೆಗಳನ್ನು ಮುಗಿಸಿದ್ದಾರೆ. ಇದೀಗ ಸಾವಿನಲ್ಲೂ ಸಾರ್ಥಕತೆ ಮೆರೆದ ದಯಾನಂದ ಅವರ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

- Advertisement -

Latest News

error: Content is protected !!