Monday, June 8, 2026
Homeಅಪರಾಧಕೊಲೆ ಬೆದರಿಕೆ ಆರೋಪ; ಕೊಟ್ಟೂರು ಸ್ವಾಮೀಜಿ ವಿರುದ್ಧ ದೂರು ನೀಡಿದ ಮಹಿಳೆ

ಕೊಲೆ ಬೆದರಿಕೆ ಆರೋಪ; ಕೊಟ್ಟೂರು ಸ್ವಾಮೀಜಿ ವಿರುದ್ಧ ದೂರು ನೀಡಿದ ಮಹಿಳೆ

- Advertisement -
- Advertisement -

ಕೊಪ್ಪಳ: ಮಹಿಳೆಯೊಬ್ಬರಿಗೆ ಕೊಲೆ ಬೆದರಿಕೆ ಒಡ್ಡಿರುವ ಆರೋಪದ ಮೇಲೆ ಕೊಪ್ಪಳ ಜಿಲ್ಲೆಯ ಕೊಟ್ಟೂರು ಸ್ವಾಮೀಜಿ ಹಾಗು ಬಸಲಿಂಗಮ್ಮ ವಿರುದ್ಧ ದೂರು ದಾಖಲಾಗಿದೆ.

ಕೊಪ್ಪಳ ಜಿಲ್ಲೆ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಕಲ್ಮಠದ ಕೊಟ್ಟೂರು ಸ್ವಾಮೀಜಿ ಹಾಗೂ ಬಸಲಿಂಗಮ್ಮ ವಿರುದ್ಧ ಕಮಲಾಕ್ಷಿ ಎಂಬವರು ದೂರು ನೀಡಿದ್ದಾರೆ. ಕೊಟ್ಟೂರೇಶ್ವರ ಕಾಲೇಜಿನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಕಮಲಾಕ್ಷಿಗೆ ಬಸಲಿಂಗಮ್ಮ ಅವಾಚ್ಯ ಶಬ್ದಗಳಿಂದ ನಿಂದಿಸಿ ನೀನು ಯಾಕೆ ಇಲ್ಲಿ ಬಂದಿದ್ದೀಯ ಎಂದು ಗಲಾಟೆ ಪ್ರಾರಂಭಿಸಿದಳು. 

ನಂತರದಲ್ಲಿ ಸ್ವಾಮೀಜಿ ಬಳಿ ಪಿಸ್ತೂಲ್ ಇದೆ. ನಾನು ನಿನ್ನ ಕೊಲೆ ಮಾಡಿಸುತ್ತೇನೆ ಎಂದು ಬಸಲಿಂಗಮ್ಮ ಬೆದರಿಕೆ ಹಾಕಿರುವುದಾಗಿ ಕಮಲಾಕ್ಷಿ ದೂರಿನಲ್ಲಿ ನಮೂದಿಸಿದ್ದಾರೆ. ಈ ವೇಳೆಯಲ್ಲಿ ಗೇಟ್ ಬಳಿ ಇದ್ದ ಕೊಟ್ಟೂರು ಸ್ವಾಮೀಜಿಯು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಕಮಲಾಕ್ಷಿ ದೂರು ನೀಡಿದ್ದಾರೆ.  ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಕೊಟ್ಟೂರು ಸ್ವಾಮೀಜಿ ಹಾಗೂ ಬಸಲಿಂಗಮ್ಮ ವಿರುದ್ಧ ಕಲಂ 323, 324, 504 ಹಾಗೂ 506 ಅಡಿಯಲ್ಲಿ ದೂರು ದಾಖಲಾಗಿರುತ್ತದೆ.

- Advertisement -

Latest News

error: Content is protected !!