Thursday, June 4, 2026
Homeಕರಾವಳಿಉಡುಪಿಚಿನ್ಮಯಿ ಆಸ್ಪತ್ರೆಯ ಮಾಲೀಕ ಕಟ್ಟೆ ಭೋಜಣ್ಣ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್

ಚಿನ್ಮಯಿ ಆಸ್ಪತ್ರೆಯ ಮಾಲೀಕ ಕಟ್ಟೆ ಭೋಜಣ್ಣ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್

- Advertisement -
- Advertisement -

ಕುಂದಾಪುರ; ಚಿನ್ಮಯಿ ಆಸ್ಪತ್ರೆಯ ಮಾಲೀಕ, ಖ್ಯಾತ ಉದ್ಯಮಿ ಕಟ್ಟೆ ಭೋಜಣ್ಣ ಆತ್ಮಹತ್ಯೆ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದೀಗ ಕಟ್ಟೆ ಭೋಜಣ್ಣ ಅವರು ಬರೆದಿಟ್ಟು ಡೆತ್ ನೋಟ್ ಲಭ್ಯವಾಗಿದ್ದು ಅದರಲ್ಲಿ ಅವರು ಎರಡು ಹೆಸರುಗಳನ್ನು ಉಲ್ಲೇಖ ಮಾಡಿದ್ದಾರೆ ಎನ್ನಲಾಗಿದೆ.

ಡೆತ್ ನೋಟ್ ನಲ್ಲಿ ಮೊಳಹಳ್ಳಿ ಗಣೇಶ್ ಶೆಟ್ಟಿ, ಇಸ್ಮಾಯಿಲ್ ಹಂಗಳೂರು ಹೆಸರು ಪ್ರಸ್ತಾಪ ಮಾಡಿದ್ದು, ಇವರು 9 ಕೋಟಿಗೂ ಅಧಿಕ ಹಣ ವಂಚಿಸಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. 2012 ಫೆಬ್ರವರಿಯಲ್ಲಿ ಮೊಳಹಳ್ಳಿ ಗಣೇಶ್ ಶೆಟ್ಟಿ ಹಾಗೂ ಇಸ್ಮಾಯಿಲ್ ಹಂಗಳೂರು 3 ಕೋಟಿ 34 ಲಕ್ಷ ರೂ.ನಗದು, 5 ಕೆ.ಜಿ ಚಿನ್ನ ಪಡೆದುಕೊಂಡಿದ್ದರು. ಆ ಬಳಿಕ ನಗ-ನಗದು ಮತ್ತು ಬಡ್ಡಿಯನ್ನೂ ವಾಪಾಸ್ ಮರಳಿಸಿರಲಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಡೆತ್ ನೋಟ್ ನಲ್ಲಿ ಗಣೇಶ್ ಶೆಟ್ಟಿ ಹಾಗೂ ಇಸ್ಮಾಯಿಲ್ ಅವರಿಂದ ಹಣ ವಸೂಲಿ ಮಾಡಿ‌ ಕುಟಂಬಕ್ಕೆ ವಾಪಾಸ್ಸು ಮಾಡುವಂತೆ ಆಗ್ರಹಿಸಿದ್ದಾರೆ.

- Advertisement -

Latest News

error: Content is protected !!