Saturday, June 6, 2026
Homeತಾಜಾ ಸುದ್ದಿನೀರಿನ ಟ್ಯಾಂಕರ್ ಹರಿದು ಮೂರು ವರ್ಷದ ಬಾಲಕ ಸಾವು

ನೀರಿನ ಟ್ಯಾಂಕರ್ ಹರಿದು ಮೂರು ವರ್ಷದ ಬಾಲಕ ಸಾವು

- Advertisement -
- Advertisement -

ಬೆಂಗಳೂರು: ನೀರಿನ ಟ್ಯಾಂಕರ್ ಗೆ ಮೂರು ವರ್ಷದ ಬಾಲಕ ಬಲಿಯಾಗಿರುವ ಘಟನೆ ಬೆಂಗಳೂರಿನ ಶ್ವೇತಾ ರೆಸಿಡೆನ್ಸಿ ಎದುರು ಇಂದು ನಡೆದಿದೆ.

ನೀರನ್ನು ಅನ್ ಲೋಡ್ ಮಾಡಿ ಟ್ಯಾಂಕರ್ ರಿವರ್ಸ್ ತೆಗೆದುಕೊಳ್ಳುತ್ತಿದ್ದಾಗ ಅಪಘಾತ ಸಂಭವಿಸಿದೆ. ನೀರಿನ ಟ್ಯಾಂಕರ್ ಹಿಂದೆ ಇದ್ದ ಬಾಲಕನನ್ನು ಗಮನಿಸದೇ ಚಾಲಕ ಟ್ಯಾಂಕರ್ ಹಿಂದೆ ತೆಗೆದಿದ್ದಾನೆ. ಟ್ಯಾಂಕರ್ ಚಕ್ರಕ್ಕೆ ಸಿಲುಕಿದ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.


ಸರ್ಜಾಪುರ ರಸ್ತೆಯಲ್ಲಿನ ಶ್ವೇತಾ ರೆಸಿಡೆನ್ಸಿ ಅಪಾರ್ಟ್ ಮೆಂಟ್ ಮುಂದೆ ಈ ಅವಘಡ ಸಂಭವಿಸಿದ್ದು, ಮೃತ ಬಾಲಕನನ್ನು ಮೂರು ವರ್ಷದ ಪ್ರತಿಷ್ಠ ಎಂದು ಗುರುತಿಸಲಾಗಿದೆ.

- Advertisement -

Latest News

error: Content is protected !!