Thursday, October 15, 2026
Homeತಾಜಾ ಸುದ್ದಿರಾತ್ರಿ ಊಟ ಇಲ್ಲ ಎಂದಿದ್ದಕ್ಕೆ ಹೋಟೆಲ್ ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

ರಾತ್ರಿ ಊಟ ಇಲ್ಲ ಎಂದಿದ್ದಕ್ಕೆ ಹೋಟೆಲ್ ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

- Advertisement -
- Advertisement -

ಕೊಪ್ಪಳ: ಊಟ ಇಲ್ಲ ಎಂದಿದ್ದಕ್ಕೆ ಸಿಟ್ಟಿಗೆದ್ದ ಅಪರಿಚಿತರು ಹೋಟೆಲ್ ಗೆ ಬೆಂಕಿ ಹಚ್ಚಿದ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.‌

ಗಂಗಾವತಿ ತಾಲೂಕಿನ ಆನೆಗೊಂದಿ ಬಳಿ ಘಟನೆ ನಡೆದಿದ್ದು, ಹೋಟೆಲ್ ಹೊತ್ತಿ ಉರಿದಿದೆ.‌

ತಡರಾತ್ರಿ 11 ರ ಮೇಲೆ ಊಟ ಇಲ್ಲ ಅಂದಿದ್ದಕ್ಕೆ ಕೋಪಗೊಂಡು ಅಪರಿಚಿತರಿಂದ ಕೃತ್ಯ ನಡೆದಿದೆ.

ಗುಡಿಸಲು ಮಾದರಿಯಲ್ಲಿದ್ದ 11 ಕೋಣೆಗಳಿಗೆ ಬೆಂಕಿ ಹಚ್ಚಲಾಗಿದ್ದು, ಬೆಂಕಿ ಹಚ್ಚಿ ಕಿಡಿಗೇಡಿಗಳು ಪರಾರಿಯಾಗಿದ್ದಾರೆ.

ಸ್ಥಳೀಯರ ಸಹಾಯದಿಂದ ಹೋಟೆಲ್ ನಿಂದ ಸಿಬ್ಬಂದಿ ಹೊರಗೆ ಬಂದಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.‌

ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

- Advertisement -

Latest News

error: Content is protected !!