Thursday, May 16, 2024
Homeತಾಜಾ ಸುದ್ದಿಟ್ರಬಲ್‌ ಶೂಟರ್‌ಗೆ ಮತ್ತೆ ಟ್ರಬಲ್:‌ ಡಿಕೆ ಶಿವಕುಮಾರ್‌ ಗೆ ಇಡಿ ಶಾಕ್:‌ ಹೊಸದಾಗಿ ಚಾರ್ಜ್‌ ಶೀಟ್‌...

ಟ್ರಬಲ್‌ ಶೂಟರ್‌ಗೆ ಮತ್ತೆ ಟ್ರಬಲ್:‌ ಡಿಕೆ ಶಿವಕುಮಾರ್‌ ಗೆ ಇಡಿ ಶಾಕ್:‌ ಹೊಸದಾಗಿ ಚಾರ್ಜ್‌ ಶೀಟ್‌ ಸಲ್ಲಿಕೆ

spot_img
- Advertisement -
- Advertisement -

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಹೊಸದಾಗಿ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಇಡಿ ಶಾಕ್ ಕೊಟ್ಟಿದೆ. 2019ರಲ್ಲಿ ನಡೆದಿದ್ದ ದಾಳಿ ಸಂಬಂಧ ಇಡಿ ಅಧಿಕಾರಿಗಳು ದೆಹಲಿಯ ವಿಶೇಷ ಕೋರ್ಟ್‌ಗೆ ಡಿಕೆ ಶಿವಕುಮಾರ್ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ. ಇಡಿ ದಾಳಿ ನಡೆದು ಎರಡೂವರೆ ವರ್ಷದ ಬಳಿಕ ಅಕ್ರಮ ಹಣ ವರ್ಗಾವಣೆ ಕೇಸ್‌ನಲ್ಲಿ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. 2019ರಲ್ಲಿ ಐಟಿ ಡಿಕೆ ಶಿವಕುಮಾರ್ ಮತ್ತು ಅವರ ಆಪ್ತರ ನಿವಾಸಗಳ ಮೇಲೆ ದಾಳಿ ನಡೆದಿತ್ತು. ದಾಳಿ ವೇಳೆ ಬರೋಬ್ಬರಿ 8 ಕೋಟಿ ರೂ. ಹಣ ಪತ್ತೆಯಾಗಿತ್ತು. ಬಳಿಕ ಈ ಪ್ರಕರಣ ಇಡಿಗೆ ವರ್ಗಾವಣೆಗೊಂಡಿತ್ತು. ಜೊತೆಗೆ ಜಾರಿ ನಿರ್ದೇಶನಾಲಯ ಡಿಕೆಶಿಯನ್ನು ಬಂಧಿಸಿ ವಿಚಾರಣೆ ನಡೆಸಿತ್ತು.

ಸದ್ಯ ಡಿಕೆ ಶಿವಕುಮಾರ್ ನಿವಾಸದಲ್ಲಿ ಹೋಮ ಹವನ ನಡೆಯುತ್ತಿದೆ. ಕುಟುಂಬಸ್ಥರ ಜೊತೆ ಪೂಜಾಕಾರ್ಯದಲ್ಲಿ ಡಿಕೆಶಿ ಭಾಗಿಯಾಗಿದ್ದಾರೆ. ಸುಮಾರು 7 ಕ್ಕೂ ಹೆಚ್ಚು ಪುರೋಹಿತರು ಭಾಗಿಯಾಗಿ ಚಂಡಿಕಾ ಹೋಮ ನೆರವೇರಿಸುತ್ತಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಹೋಮ ನಡೆಯುತ್ತಿದೆ. ಆದರೆ ಕಳೆದೆರಡು ವರ್ಷಗಳಿಂದ ಪೂಜಾ ಕಾರ್ಯ ನಡೆದಿರಲಿಲ್ಲ. ಕೊರೊನಾ ಕಾರಣದಿಂದ ನಡೆದಿರಲಿಲ್ಲ ಎಂದು ತಿಳಿದುಬಂದಿದೆ

ಇನ್ನು ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಸೋದರ ಡಿಕೆ ಸುರೇಶ್, ಇದು ರಾಜಕೀಯ ಪ್ರೇರಿತ, ಬಿಜೆಪಿಗೆ ಶರಣಾಗುವ ಪ್ರಶ್ನೆಯೇ ಇಲ್ಲ. ಕೋರ್ಟ್ ಮೂಲಕ ಪ್ರತಿ ಪಡೆಯುವಂತೆ ವಕೀಲರಿಗೆ ಸೂಚಿಸುತ್ತೇವೆ ಎಂದರು. ಡಿಕೆ ಶಿವಕುಮಾರ್ ಮತ್ತು ಕಾಂಗ್ರೆಸ್‌ನ ಹೋರಾಟ ಮುಂದುವರಿಯುತ್ತದೆ. ಕಳೆದ 4 ವರ್ಷದಿಂದ ತನಿಖೆ ನಡೆಯುತ್ತಿದೆ. ಅವರು ಏನು ಬೇಕಾದರು ಮಾಡಲಿ. 8 ವರ್ಷ ಆಯ್ತು ಬಿಜೆಪಿ ಅಧಿಕಾರಕ್ಕೆ ಬಂದು. ಎಲ್ಲಾ ಸಂಸ್ಥೆಗಳನ್ನ ದುರುಪಯೋಗ ಮಾಡುತ್ತಿದ್ದಾರೆ. ಇವರಿಂದ ನಮಗೆ ನ್ಯಾಯ ಸಿಗುತ್ತಾ? ನಾವು ಎಲ್ಲದಕ್ಕೂ ಸಿದ್ಧರಾಗಿದ್ದೇವೆ ಎಂದು ಸುರೇಶ್ ಹೇಳಿದ್ರು.

- Advertisement -
spot_img

Latest News

error: Content is protected !!