Saturday, June 6, 2026
Homeಕರಾವಳಿಉಡುಪಿಉಡುಪಿಯಲ್ಲಿ ಕಾರಿನಲ್ಲಿ ಜೋಡಿ ಅತ್ಮಹತ್ಯೆ ಪ್ರಕರಣ : ಮಧ್ಯರಾತ್ರಿ ಇಂದ್ರಾಳಿ ಸ್ಮಶಾನದಲ್ಲಿ ಅಂತ್ಯಕ್ರಿಯೆ

ಉಡುಪಿಯಲ್ಲಿ ಕಾರಿನಲ್ಲಿ ಜೋಡಿ ಅತ್ಮಹತ್ಯೆ ಪ್ರಕರಣ : ಮಧ್ಯರಾತ್ರಿ ಇಂದ್ರಾಳಿ ಸ್ಮಶಾನದಲ್ಲಿ ಅಂತ್ಯಕ್ರಿಯೆ

- Advertisement -
- Advertisement -

ಉಡುಪಿ: ಬೆಂಗಳೂರಿನ ಜೋಡಿ ಉಡುಪಿಯಲ್ಲಿ ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಮರಣೋತ್ತರ ಪರೀಕ್ಷೆ ಬೆನ್ನಲ್ಲೇ ಮೃತದೇಹಗಳ ಅಂತ್ಯಸಂಸ್ಕಾರ ನಡೆಸಲಾಗಿದೆ.

ನಿನ್ನೆ ತಡರಾತ್ರಿ ಆಗಮಿಸಿದ್ದ ಎರಡೂ ಕುಟುಂಬಸ್ಥರು ಮರಣೋತ್ತರ ಪೂರ್ಣಗೊಂಡ ಬೆನ್ನಲ್ಲೇ ಅಂತಿಮ ಸಂಸ್ಕಾರ ನಡೆಸಲು ನಿರ್ಧಾರ ತೆಗೆದುಕೊಂಡಿದ್ದಾರೆ‌.

ಇಂದ್ರಾಳಿಯ ಸ್ಮಶಾನದಲ್ಲಿ ರಾತ್ರಿ ಒಂದು ಗಂಟೆಗೆ ಅಂತಿಮ ಸಂಸ್ಕಾರ ನಡೆಸಲಾಗಿದ್ದು, ಎರಡೂ ಕುಟುಂಬದವರು ಅಂತಿಮ ಸಂಸ್ಕಾರ ಪೂರೈಸಿ ಬೂದಿ ಕೊಂಡೊಯ್ದಿದ್ದಾರೆ.

ಮೃತದೇಹಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದ ಕಾರಣ ಉಡುಪಿಯಲ್ಲೇ ಶವ ಸಂಸ್ಕಾರ ನಡೆಸಲಾಗಿದೆ.‌

ಭಾನುವಾರ ಬೆಳಗ್ಗಿನ ಜಾವ ಬೆಂಗಳೂರಿನ ಯಶವಂತ ಯಾದವ್ ಮತ್ತು ಜ್ಯೋತಿ ಬ್ರಹ್ಮಾವರ ಸಮೀಪದ ಹೆಗ್ಗುಂಜೆಯಲ್ಲಿ ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.‌

- Advertisement -

Latest News

error: Content is protected !!