Thursday, June 4, 2026
Homeತಾಜಾ ಸುದ್ದಿಐಪಿಎಸ್ ಅಧಿಕಾರಿ ರವಿ ಡಿ. ಚೆನ್ನಣ್ಣನವರ್ ಸೋದರನ ವಿರುದ್ಧ ಎಫ್ ಐ ಆರ್

ಐಪಿಎಸ್ ಅಧಿಕಾರಿ ರವಿ ಡಿ. ಚೆನ್ನಣ್ಣನವರ್ ಸೋದರನ ವಿರುದ್ಧ ಎಫ್ ಐ ಆರ್

- Advertisement -
- Advertisement -

ಬೆಂಗಳೂರು : ಪತ್ನಿಗೆ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿ ರವಿ ಡಿ. ಚೆನ್ನಣ್ಣನವರ್ ಸೋದರ ರಾಘವೇಂದ್ರ ಚನ್ನಣ್ಣನವರ್ ವಿರುದ್ಧ ಎಫ್ ಐಆರ್ ದಾಖಲಾಗಿದೆ.

2015 ರಲ್ಲಿ ರೋಜಾ ಮತ್ತು ರಾಘವೇಂದ್ರ ಚನ್ನಣ್ಣನವರ್ ಮದುವೆಯಾಗಿದ್ದರು. ರೋಜಾ ಮದುವೆಗೂ ಮುನ್ನ ಮತ್ತೊಬ್ಬ ಮಹಿಳೆಯೊಂದಿಗೆ ರಾಘವೇಂದ್ರ ಮದುವೆಯಾಗಿದ್ದು, ಈ ವಿಷಯವನ್ನು ಮುಚ್ಚಿಟ್ಟಿದ್ದರು. ಮದುವೆಯಾದ ಒಂದೇ ವರ್ಷದಲ್ಲಿ ಅವರನ್ನು ಬಿಟ್ಟಿದ್ದು, ಮೊದಲು ಮದುವೆಯಾಗಿದ್ದ ಮಹಿಳೆಯೊಂದಿಗೆ ಸಂಸಾರ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದ್ದು, ಬೆಂಗಳೂರಿನ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ರಾಘವೇಂದ್ರ ಡಿ ಚನ್ನಣ್ಣನವರ್ ವಿರುದ್ಧ ಎಫ್ ಆರ್ ದಾಖಲಾಗಿದೆ.

2015 ರಲ್ಲಿ ರೋಜಾ ಮತ್ತು ರಾಘವೇಂದ್ರ ಚನ್ನಣ್ಣನವರ್ ಮದುವೆಯಾಗಿದ್ದು, ರವಿ ಚೆನ್ನಣ್ಣನವರ್ ಮುಂದೆ ನಿಂತು ಮದುವೆ ಮಾಡಿಸಿದ್ದರು. ಆದರೆ ಈ ವಿಷಯ ರವಿ ಚೆನ್ನಣ್ಣನವರ್ ಮುಂದೆ ಹೇಳಿದಾಗ ಮುಂದೆ ಎಲ್ಲ ಸರಿಹೋಗುತ್ತದೆ. ನೀನು ಉನ್ನತ ಶಿಕ್ಷಣದ ಕಡೆ ಗಮನ ಹರಿಸು ಎಂದು ಹೇಳಿದ್ದರೆಂದು ರೋಜಾ ದೂರು ನೀಡಿದ್ದಾರೆ.

- Advertisement -

Latest News

error: Content is protected !!