Thursday, May 16, 2024
Homeಕರಾವಳಿಉಡುಪಿಮಣಿಪಾಲ ಕೆಎಂಸಿಯಲ್ಲಿ ಆಯುಷ್ಮಾನ್ ಗೆ 100 ಬೆಡ್ ಮೀಸಲು : ಆರೋಗ್ಯ ಇಲಾಖೆಯಿಂದ ಆದೇಶ

ಮಣಿಪಾಲ ಕೆಎಂಸಿಯಲ್ಲಿ ಆಯುಷ್ಮಾನ್ ಗೆ 100 ಬೆಡ್ ಮೀಸಲು : ಆರೋಗ್ಯ ಇಲಾಖೆಯಿಂದ ಆದೇಶ

spot_img
- Advertisement -
- Advertisement -

ಉಡುಪಿ: ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಫಲಾನುಭವಿಗಳಿಗೆ ಕನಿಷ್ಠ 100 ಹಾಸಿಗೆಗಳನ್ನು ಮೀಸಲಿಡಲು ರಾಜ್ಯ ಆರೋಗ್ಯ ಇಲಾಖೆ ಆದೇಶ ನೀಡಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಕಾರ್ಯಕಾರಿ ನಿರ್ದೇಶಕರು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆ.

ಕೆಎಂಸಿ ಆಸ್ಪತ್ರೆಯು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ 2018ರಿಂದ ನೋಂದಣಿಯಾಗಿದೆ.

ಆದರೆ, ಆಸ್ಪತ್ರೆಯಲ್ಲಿ ಎಬಿಎಆರ್‌ಕೆ ಯೋಜನೆಯಡಿಯಲ್ಲಿ ದಾಖಲಾಗುವ ರೋಗಿಗಳಿಗೆ ಸೂಕ್ತವಾಗಿ ಹಾಸಿಗೆಗಳು ಲಭ್ಯವಾಗದೇ ಯೋಜನೆಯಿಂದ ವಿಮುಖರಾಗುತ್ತಿದ್ದರು.

ಈ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಈ ಸಮಸ್ಯೆಯ ಕುರಿತು ಸರಕಾರದ ಗಮನ ಸೆಳೆದಿದ್ದರು.

ಈ ಹಿನ್ನೆಲೆಯಲ್ಲಿ ಎಬಿಎಆರ್‌ಕೆ ಯೋಜನೆಯಡಿ ಶಿಫಾರಸ್ಸಾದ ರೋಗಿಗಳಿಗೆ 100 ಹಾಸಿಗೆಗಳನ್ನು ಮೀಸಲಿಟ್ಟು, ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದೆ.

- Advertisement -
spot_img

Latest News

error: Content is protected !!