- Advertisement -
- Advertisement -
ಮೂಡಬಿದಿರೆ: ಮಾಲೀಕನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ವಾಪಾಸ್ಸಾಗುತ್ತಿದ್ದಾಗ ಅಪಘಾತವಾಗಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಮೂಡುಬಿದಿರೆ ಸಮೀಪದ ಗಾಂಧೀ ನಗರದಲ್ಲಿ ನಡೆದಿದೆ.ಪುತ್ತಿಗೆ ಗ್ರಾಮದ ಹಂಡೇಲು ಕಾಪಿಕಾಡು ನಿವಾಸಿ ವಿನಯ್ (48) ಮೃತ ದುರ್ದೈವಿ.
ಗಾಂಧೀನಗರದಲ್ಲಿ ಬೀಡಿ ಕಾಂಟ್ರ್ಯಾಕ್ಟರ್ ಆಗಿರುವ ಸಂಜೀವ ಅವರು ಸೋಮವಾರ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಅವರ ಬೀಡಿ ಬ್ರ್ಯಾಂಚ್‌ನ ಸಹಾಯಕ ವಿನಯ್ ಅವರು ಅಂತಿಮ ದರ್ಶನ ಪಡೆಯಲು ತೆರಳಿದ್ದರು. ಅಂತಿಮ ದರ್ಶನ ಮುಗಿಸಿ ರಾತ್ರಿ ಗಾಂಧೀನಗರದ ಬಳಿ ರಸ್ತೆ ದಾಟುವ ವೇಳೆ ವಿನಯ್ ಅವರಿಗೆ ಕಾರೊಂದು ಢಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡ ಅವರನ್ನು ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಪುತ್ರನನ್ನು ಅಗಲಿದ್ದಾರೆ.
- Advertisement -