Friday, June 5, 2026
Homeಕರಾವಳಿವಿಟ್ಲ: 9ನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ

ವಿಟ್ಲ: 9ನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ

- Advertisement -
- Advertisement -

ವಿಟ್ಲ: ಒಂಭತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ವಿಟ್ಲದ ಅಳಿಕೆ ಗ್ರಾಮದ ಚಂದಾಡಿ ಎಂಬಲ್ಲಿ ನಡೆದಿದೆ. ಅನ್ವಿತಾ ಹೆಗ್ಡೆ ಮೃತ ವಿದ್ಯಾರ್ಥಿನಿ.
ವಿನಯ್ ಹೆಗ್ಡೆ ಹಾಗೂ ಸಾಯಿಗೀತಾ ದಂಪತಿಯ ಪುತ್ರಿಯಾಗಿರುವ ಅನ್ವಿತಾ ಹೆಗ್ಡೆ ವಿಟ್ಲ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದಳು. ನಿನ್ನೆ ರಾತ್ರಿ ಮಲಗಿದ್ದ ವೇಳೆ ಅನ್ವಿತಾಗೆ ಹೃದಯಾಘಾತವಾಗಿದೆ. ಇದ್ದೊಬ್ಬ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

- Advertisement -

Latest News

error: Content is protected !!