Sunday, May 19, 2024
Homeತಾಜಾ ಸುದ್ದಿಗಂಡನ ಜೊತೆ ಜಗಳವಾಡಿ ಸಾಯುತ್ತೇನೆಂದು ಕೆರೆಯಲ್ಲಿ ಕುಳಿತ ಮಹಿಳೆ

ಗಂಡನ ಜೊತೆ ಜಗಳವಾಡಿ ಸಾಯುತ್ತೇನೆಂದು ಕೆರೆಯಲ್ಲಿ ಕುಳಿತ ಮಹಿಳೆ

spot_img
- Advertisement -
- Advertisement -

ಬೆಂಗಳೂರು:  ಮಹಿಳೆಯೊಬ್ಬರು ಗಂಡನ ಜೊತೆಗೆ ಜಗಳವಾಡಿ ಸಾಯುತ್ತೇನೆ ಅಂತ ಕೆರೆಯಲ್ಲಿ ಕೂತ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕೋರಮಂಗಲ 3ನೇ ಬ್ಲಾಕ್‍ನಲ್ಲಿ ಈ ಘಟನೆ ನಡೆದಿದೆ. ವಾಕಿಂಗ್ ಹೋಗುವ ವೇಳೆ ಗಂಡನೊಂದಿಗೆ ಮಹಿಳೆ ಜಗಳವಾಡಿದ್ದಾರೆ. ನಂತರ ಕೋಪ ಮಾಡಿಕೊಂಡು ಮಹಿಳೆ ನಾನು ಸಾಯುತ್ತೇನೆ ಎಂದು ಕೋರಮಂಗಲ ಮೂರನೇ ಬ್ಲಾಕ್ ನಲ್ಲಿರುವ ಕೆರೆಯೊಳಗೆ ಕುಳಿತುಕೊಂಡಿದ್ದಾರೆ.

ನಂತರ ಮಹಿಳೆ ಮನವೊಲಿಸಲು ಸಾಕಷ್ಟು ಮಂದಿ ಪ್ರಯತ್ನಿಸಿದ್ದಾರೆ. ಆದರೆ ಮಹಿಳೆ ಯಾರಾದರೂ ಹತ್ತಿರ ಬಂದರೆ ಕೆರೆಯೊಳಗೆ ಮುಳುಗಿ ಬಿಡುತ್ತೇನೆ ಎಂದು ಬೆದರಿಕೆಯೊಡ್ಡಿದ್ದಾರೆ. ಕೊನೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಆಕೆಯ ಮನವೊಲಿಸಿ ಕೆರೆಯಿಂದ ಮೇಲಕ್ಕೆ ಕರೆಸಿದ್ದಾರೆ.

- Advertisement -
spot_img

Latest News

error: Content is protected !!