Sunday, June 7, 2026
Homeಅಪರಾಧಕುದ್ದುಪದವು ಅಪಘಾತ ವಿಚಾರಕ್ಕೆ ಎರಡು ತಂಡಗಳಿಂದ ಹೊಡೆದಾಟ

ಕುದ್ದುಪದವು ಅಪಘಾತ ವಿಚಾರಕ್ಕೆ ಎರಡು ತಂಡಗಳಿಂದ ಹೊಡೆದಾಟ

- Advertisement -
- Advertisement -

ವಿಟ್ಲ:  ಇಲ್ಲಿನ ಕುದ್ದುಪದವು ಪ್ರದೇಶದಲ್ಲಿ ಮೇ. 14 ರ ತಡರಾತ್ರಿ ಕೇಪು ಗಣೇಶ ಎಂಬವರಿಗೆ ಲಾರಿ  ಗುದ್ದಿಕೊಂಡು ಹೋದ ವಿಚಾರಕ್ಕೆ  ಎರಡು ತಂಡಗಳಿಂದ ಮಾರಾಮಾರಿ ನಡೆದಿದೆ.

ಲಾರಿ ಗುದ್ದಿಕೊಂಡು ಹೋದ ವಿಚಾರವಾಗಿ ಕುದ್ದುಪದವು ಜಂಕ್ಷನ್ ನಲ್ಲಿ ಲಾರಿ ಡ್ರೈವರನ್ನು ತಡೆದು ಕೇಳಿದಾಗ ಪರಸ್ಪರ ಮಾತಿನ ಚಕಾಮಕಿ ನಡೆದಿದ್ದು, ಎರಡು ಗುಂಪುಗಳ ನಡುವೆ ರಾಡ್ ಹಾಗೂ ಮಾರಕಾಸ್ತ್ರದಿಂದ ಮಾರಣಾಂತಿಕ  ಹೊಡೆದಾಟವಾಗಿದೆ. 

ಈ ವೇಳೆ ಗಂಭೀರ ಗಾಯಗೊಂಡ ರಕ್ಷಿತ್ ಹಾಗೂ ಗಿರೀಶ್ ಎಂಬವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆಯಲ್ಲಿ ಸ್ವಿಫ್ಟ್  ಕಾರನ್ನು ಗುದ್ದಿ ಪುಡಿ ಮಾಡಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ವಿಟ್ಲ ಪೋಲಿಸರು ಕಾರನ್ನು ವಶಪಡಿಸಿಕೊಂಡಿದ್ದಾರೆ.  

- Advertisement -

Latest News

error: Content is protected !!