Saturday, June 6, 2026
Homeತಾಜಾ ಸುದ್ದಿನನ್ನ ತಾಯಿ ಖಾತೆಗೆ 1 ಲಕ್ಷ ರೂಪಾಯಿ ಬಂದಿದೆ ಎಂದು ಹೇಳಿ ಪೇಚಿಗೆ ಸಿಲುಕಿದ ಸಂಸದ...

ನನ್ನ ತಾಯಿ ಖಾತೆಗೆ 1 ಲಕ್ಷ ರೂಪಾಯಿ ಬಂದಿದೆ ಎಂದು ಹೇಳಿ ಪೇಚಿಗೆ ಸಿಲುಕಿದ ಸಂಸದ ನಳೀನ್ ಕುಮಾರ್ ಕಟೀಲ್

- Advertisement -
- Advertisement -

ಮಂಗಳೂರು :ನನ್ನ ತಾಯಿ‌‌ ಖಾತೆಗೆ ಕೇಂದ್ರ ಸರ್ಕಾರದಿಂದ 1 ಲಕ್ಷ ರೂಪಾಯಿ ಬಂದಿದೆ ಎಂದು ಹೇಳಿ ಪೇಚಿಗೆ ಸಿಲುಕಿದಿದ್ದಾರೆ ಸಂಸದ ನಳೀನ್ ಕುಮಾರ್ ಕಟೀಲ್. ಮೊನ್ನೆ ಕರೆ ಮಾಡಿ‌ ನನ್ನ ಎಕೌಂಟ್ ಗೆ ಒಂದು‌ ಲಕ್ಷ ಬಂದಿದೆ ಎಂದ್ರು, ಹೇಗೆ ಅಮ್ಮ ಎಂದು ಕೇಳಿದೆ, ನನಗೆ ಗೊತ್ತಿಲ್ಲ, ಅದು ಕೇಂದ್ರ ಸರಕಾರದಿಂದ ಬಂದಿದೆ ಎಂದು ತಾಯಿ ಹೇಳಿದ್ರು ಎನ್ನೋ ಮೂಲಕ ನಳೀನ್ ಕುಮಾರ್ ಕಟೀಲ್‌ ಹೇಳಿಕೊಂಡು ಇದೀಗ ವಿವಾದಕ್ಕೆ ಸಿಲುಕಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಅವರ ತಾಯಿಯ ಖಾತೆಗೆ ಕೇಂದ್ರ ಸರಕಾರದಿಂದ ಹೇಗೆ ಹಣ ಸಂದಾಯವಾಯಿತು? ಇದು ಯಾವ ಯೋಜನೆಯ ಹಣ ಎಂದು ಸಂಸದರ ಹೇಳಿಕೆ‌ ವೈರಲ್ ಬೆನ್ನಲ್ಲೇ ಕಾಂಗ್ರೆಸ್ ಪ್ರಶ್ನಿಸಿದೆ.

ಈ ಬಗ್ಗೆ ಕೆಪಿಸಿಸಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ನಳಿನ್ ಕುಮಾರ್ ಭಾಷಣದ ವೀಡಿಯೊ ತುಣುಕೊಂದನ್ನು ಹಂಚಿಕೊಂಡಿದ್ದು, ಸಂಸದರ ತಾಯಿಯ ಖಾತೆಗೆ ಕೇಂದ್ರದಿಂದ ಹೇಗೆ ಹಣ ಸಂದಾಯವಾಯಿತು? ಇದು ಯಾವ ಯೋಜನೆಯ ಹಣ? ಲಕ್ಷಗಟ್ಟಲೆ ಸಂಬಳ ಪಡೆಯುವವರ ತಾಯಿ ಫಲಾನುಭವಿ ಆದದ್ದು ಹೇಗೆ? ಯಾವ ರೈತರ ಖಾತೆಗೆ ಲಕ್ಷಗಟ್ಟಲೆ ಹಣ ಬಂದಿದೆ? ಅಂತಹ ಯಾವ ಯೋಜನೆ ಇದೆ? ಸಂಸದರು ಹೇಳಿ ಎಂದು ಹೇಳಿದೆ.

- Advertisement -

Latest News

error: Content is protected !!