Monday, June 8, 2026
Homeತಾಜಾ ಸುದ್ದಿಪ್ರವಾಹ ಪೀಡಿತ ಚಾರ್ಮಾಡಿಯ ಕೊಳಂಬೆ ಪರಿಸರದಲ್ಲಿ ಪುನರ್ ನಿರ್ಮಾಣಗೊಂಡ 12ಮನೆಗಳ ಗೃಹಪ್ರವೇಶ

ಪ್ರವಾಹ ಪೀಡಿತ ಚಾರ್ಮಾಡಿಯ ಕೊಳಂಬೆ ಪರಿಸರದಲ್ಲಿ ಪುನರ್ ನಿರ್ಮಾಣಗೊಂಡ 12ಮನೆಗಳ ಗೃಹಪ್ರವೇಶ

- Advertisement -
- Advertisement -

ಚಾರ್ಮಾಡಿ: ಬೆಳ್ತಂಗಡಿ ತಾಲೂಕಿನ ಪ್ರವಾಹ ಪೀಡಿತ ಚಾರ್ಮಾಡಿ ಗ್ರಾಮದ ಕೊಳಂಬೆ ಪರಿಸರದಲ್ಲಿ ಬದುಕು ಕಟ್ಟೋಣ ಬನ್ನಿ ತಂಡದಿಂದ ನಿರ್ಮಾಣಗೊಂಡ 12 ಮನೆಗಳ ಗೃಹಪ್ರವೇಶ ಮೇ.8 ರಂದು ನಡೆಯಿತು.


ಕಾರ್ಯಕ್ರಮದ ಉದ್ಘಾಟನೆಯನ್ನು ಯುವ ಬ್ರಿಗೆಡ್ ಸ್ಥಾಪಕರಾದ ಚಕ್ರವರ್ತಿ ಸೂಲಿಬೆಲೆ ನೆರವೇರಿಸಿದರು. ಅಧ್ಯಕ್ಷತೆಯನ್ನು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಶಾಸಕ ಹರೀಶ್ ಪೂಂಜಾ ರವರು ವಹಿಸಿದ್ದರು.


ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪ್ ಸಿಂಹ ನಾಯಕ್, ರೋಟರಿ ಕ್ಲಬ್ ಅಧ್ಯಕ್ಷ ಶರತ್ ಕೃಷ್ಣ ಪಡ್ವೆಟ್ನಾಯ, RSS ನ ಪ್ರಮುಖರಾದ ಸುಬ್ರಾಯ ನಂದೋಡಿ, ಉದ್ಯಮಿ ಶಶಿಧರ ಶೆಟ್ಟಿ, ಖ್ಯಾತ ತುಳು ಚಲನಚಿತ್ರ ನಟ ಅರವಿಂದ ಬೋಳಾರ್ ಉಪಸ್ಥಿತರಿದ್ದರು.


ಗೌರವ ಉಪಸ್ಥಿತಿಯಲ್ಲಿ ಚಾರ್ಮಾಡಿ ಪಂ.ಅಭಿವೃದ್ದಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ, ಗ್ರಾ.ಪಂ ಅಧ್ಯಕ್ಷ ಕೆ.ವಿ ಪ್ರಸಾದ್, ಮುಂಡಾಜೆ ಗ್ರಾ.ಪಂ ಅಧ್ಯಕ್ಷೆ ರಂಜನಿ, ನೆರಿಯ ಗ್ರಾ.ಪಂ ಅಧ್ಯಕ್ಷೆ ವಸಂತಿ ಭಾಗವಹಿಸಿದ್ದರು.

- Advertisement -

Latest News

error: Content is protected !!