Friday, June 5, 2026
Homeಕರಾವಳಿಉಡುಪಿಕರಾವಳಿ ಜಿಲ್ಲೆಗಳಲ್ಲಿ ಈದ್ ಉಲ್ ಫಿತರ್ ಸಂಭ್ರಮ: ಸಾಮೂಹಿಕ ನಮಾಜ್ ನಲ್ಲಿ ಭಾಗಿಯಾದ ಮುಸ್ಲಿಂ ಬಾಂಧವರು

ಕರಾವಳಿ ಜಿಲ್ಲೆಗಳಲ್ಲಿ ಈದ್ ಉಲ್ ಫಿತರ್ ಸಂಭ್ರಮ: ಸಾಮೂಹಿಕ ನಮಾಜ್ ನಲ್ಲಿ ಭಾಗಿಯಾದ ಮುಸ್ಲಿಂ ಬಾಂಧವರು

- Advertisement -
- Advertisement -

ಮಂಗಳೂರು: ಒಂದು ತಿಂಗಳ ಕಾಲ ರಂಜಾನ್ ಮಾಸದ ಉಪವಾಸ ಆಚರಿಸಿದ ಮುಸ್ಲಿಮರು ಇಂದು ದಕ್ಷಿಣ ಕನ್ನಡ ಹಾಗೂ ಉಡುುಪಿ ಜಿಲ್ಲೆಯಲ್ಲಿ ಈದ್ ಉಲ್ ಫಿತರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ರಂಜಾನ್ ತಿಂಗಳ ಚಂದ್ರ ದರ್ಶನದೊಂದಿಗೆ ಆರಂಭವಾಗುವ ಉಪವಾಸವು ಶಾವಾಲ್‌ ತಿಂಗಳ ಚಂದ್ರ ದರ್ಶನದೊಂದಿಗೆ ಕೊನೆಗೊಂಡಿದೆ. ಶಾವಾಲ್‌ ತಿಂಗಳ ಮೊದಲ ದಿನವಾದ ಇಂದು ‘ಈದ್ ಉಲ್ ಫಿತರ್​’ ಹಬ್ಬವೆಂದು ಆಚರಿಸುತ್ತಾರೆ.

ಮಂಗಳೂರಿನ ಬಾವುಟ ಗುಡ್ಡದಲ್ಲಿರುವ ಈದ್ಗಾ ಮಸೀದಿಯಲ್ಲಿ ಮುಸ್ಲಿಮರು ಸಾಮೂಹಿಕ ನಮಾಜ್ ಮಾಡಿದರು. ಮಸೀದಿಯಲ್ಲಿ ಈದ್ ಪ್ರಾರ್ಥನೆ ಮಾಡಿದ ಬಳಿಕ ಎಲ್ಲರೂ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

- Advertisement -

Latest News

error: Content is protected !!