Thursday, June 4, 2026
Homeಕರಾವಳಿವಿಟ್ಲ: ರಿಕ್ಷಾ ಹಾಗೂ ಸ್ಕೂಟರ್ ನಡುವೆ ಅಪಘಾತ, ಇಬ್ಬರಿಗೆ ಗಾಯ

ವಿಟ್ಲ: ರಿಕ್ಷಾ ಹಾಗೂ ಸ್ಕೂಟರ್ ನಡುವೆ ಅಪಘಾತ, ಇಬ್ಬರಿಗೆ ಗಾಯ

- Advertisement -
- Advertisement -

ವಿಟ್ಲ: ರಿಕ್ಷಾ ಹಾಗೂ ಸ್ಕೂಟರ್ ನಡುವೆ ಅಪಘಾತ ಸಂಭವಿಸಿ ಇಬ್ಬರು ಗಾಯಗೊಂಡಿರುವ ಘಟನೆ ವಿಟ್ಲದ ಕಂಬಳಬೆಟ್ಟು ಸೇತುವೆ ಬಳಿ ನಡೆದಿದೆ.
ವಿಟ್ಲದಿಂದ ಕಂಬಳಬೆಟ್ಟುಗೆ ಹೋಗುತ್ತಿದ್ದ ಆಟೋ, ಪುತ್ತೂರಿನ ವಿಟ್ಲಕ್ಕೆ ತೆರಳುತ್ತಿದ್ದ ಆಟೋಗೆ ಡಿಕ್ಕಿಯಾಗಿದೆ. ಪರಿಣಾಮ ಮಹಮ್ಮದ್ ಯಾಸಿನ್ ಹಾಗೂ ಅಬ್ದುಲ್ ರೆಹಮಾನ್ ಎನ್ನುವವರು ಗಾಯಗೊಂಡಿದ್ದಾರೆ. ಅಪಘಾತವಾಗುತ್ತಿದ್ದಂತೆ ಆಟೋ ಚಾಲಕ ಪರಾರಿಯಾಗಲು ಯತ್ನಿಸಿದ್ದಾನೆ ಎನ್ನಲಾಗಿದ್ದು, ಈ ವೇಳೆ ಸಾರ್ವಜನಿಕರು ತಡೆದಿದ್ದಾರೆ ಎನ್ನಲಾಗಿದೆ.

ಬಳಿಕ ಅದೇ ರಿಕ್ಷಾದಲ್ಲಿ ಗಾಯಾಳುಗಳನ್ನು ಪುತ್ತೂರು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

- Advertisement -

Latest News

error: Content is protected !!