- Advertisement -
![]()
- Advertisement -
ಕುಂದಾಪುರ : ಉಯ್ಯಾಲೆ ಆಡುತ್ತಿದ್ದ ಬಾಲಕಿಯೊಬ್ಬಳಿಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಬಾಲಕಿ ಮೃತಪಟ್ಟ ಘಟನೆ ಕುಂದಾಪುರದ ಕೋಟೇಶ್ವರ ನಿರಸ್ವಾಲೆ ರಸ್ತೆಯ ಬೆಟ್ಟುಮನೆ ಎಂಬಲ್ಲಿ ನಡೆದಿದೆ. ಸದಾನಂದ ಮತ್ತು ಅನಿತಾ ದಂಪತಿ ಪುತ್ರಿ ಪ್ರಾಧಾನ್ಯ (9) ಮೃತ ದುರ್ದೈವಿ.
ಬೇಸಿಗೆ ರಜೆಯಾದ್ದರಿಂದ ಮಕ್ಕಳೆಲ್ಲಾ ಮನೆಯ ಅಂಗಳದಲ್ಲಿದ್ದ ಮರಕ್ಕೆ ಸೀರೆಯಿಂದ ಜೋಕಾಲಿ ಕಟ್ಟಿ ಕುಳಿತು ಆಟ ಆಡುತ್ತಿದ್ದರು. ಆಗ ಇವರ ಸಂಬಂಧಿಕ ಸಂತೋಷ್, ಕಾರನ್ನು ಒಮ್ಮಲೇ ನಿರ್ಲಕ್ಷತನದಿಂದ ಅತೀ ವೇಗವಾಗಿ ಮುಂದಕ್ಕೆ ಚಲಾಯಿಸಿದ ಪರಿಣಾಮ ಕಾರು ಜೋಕಾಲಿ ಆಡುತ್ತಿದ್ದ ಪ್ರಾಧಾನ್ಯಳಿಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ.
ಇದರಿಂದ ಗಂಭೀರವಾಗಿ ಗಾಯಗೊಂಡ ಪ್ರಾಧಾನ್ಯ ಕೊಟೇಶ್ವರ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾಳೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -


