Friday, June 5, 2026
HomeUncategorizedಪತಿ, ನಾದಿನಿ ಕಿರುಕುಳಕ್ಕೆ ಬೇಸತ್ತು ಕಾವೇರಿ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ

ಪತಿ, ನಾದಿನಿ ಕಿರುಕುಳಕ್ಕೆ ಬೇಸತ್ತು ಕಾವೇರಿ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ

- Advertisement -
- Advertisement -

ಮಂಡ್ಯ: ಗಂಡ ಹಾಗೂ ನಾದಿನಿ ಕಿರುಕುಳಕ್ಕೆ ಬೇಸತ್ತ ಫಿಸಿಯೋ ಥೆರಪಿಸ್ಟ್ ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಮಂಡ್ಯ ಜಿಲ್ಲೆ ಬೆಳಕವಾಡಿ ಬಳಿ ನಡೆದಿದೆ.


ಚಾಮರಾಜನಗರದ ಜೆ ಎಸ್ ಎಸ್ ಆಸ್ಪತ್ರೆಯಲ್ಲಿ ಫಿಜಿಯೋ ಥೆರಪಿಸ್ಟ್ ಆಗಿದ್ದನಾಗವೇಣಿ ಆತ್ಮಹತ್ಯೆಗೆ ಶರಣಾದ ಮಹಿಳೆ, ಶನಿವಾರದಿಂದ ನಾಪತ್ತೆಯಾಗಿದ್ದ ಮಹಿಳೆ ಮೃತದೇಹ ಮಂಡ್ಯ ಜಿಲ್ಲೆಯ ಬೆಳಕವಾಡಿ ಬಳಿ ಕಾವೇರಿ ನದಿಯಲ್ಲಿ ಪತ್ತೆಯಾಗಿದೆ.


ಪತ್ನಿ ನಾಗವೇಣಿ ಶೀಲ ಶಂಕಿಸಿದ್ದಪತಿ ಸ್ವಾಮಿ ನಾಯಕ ಹಾಗೂ ನಾದಿನಿ ಭಾಗ್ಯ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಪತಿ ಸ್ವಾಮಿ ನಾಯಕ್ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಕ್ಷಯರೋಗ ಸೂಪರ್ ವೈಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಪತ್ನಿಯ ಮೇಲೆ ಅನಗತ್ಯವಾಗಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದ ಎನ್ನಲಾಗಿದೆ.
ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!