Wednesday, August 26, 2026
Homeಕರಾವಳಿಮಂಗಳೂರು ಬಾಲಕಿಗೆ ಕಂಡಕ್ಟರ್ ಫೋನ್ ನಂಬರ್ ಕೊಟ್ಟ ಪ್ರಕರಣ : ಆರೋಪಿಯನ್ನು ವಶಕ್ಕ ಪಡೆದ...

ಮಂಗಳೂರು ಬಾಲಕಿಗೆ ಕಂಡಕ್ಟರ್ ಫೋನ್ ನಂಬರ್ ಕೊಟ್ಟ ಪ್ರಕರಣ : ಆರೋಪಿಯನ್ನು ವಶಕ್ಕ ಪಡೆದ ಪೊಲೀಸರು

- Advertisement -
- Advertisement -

ಮಂಗಳೂರು : ಬಾಲಕಿಗೆ ಮೊಬೈಲ್ ನಂಬರ್ ಕೊಟ್ಟ ಕಂಡಕ್ಟರ್‌ ವಿರುದ್ಧ ಬಾಲಕಿಯ ತಾಯಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಾಗಲಕೋಟ, ಗುಳೇದಗುಡ್ಡ ತಾಲೂಕಿನ ಲಿಂಗಾಪುರ ಗ್ರಾಮ ನಿವಾಸಿ ಮಂಜುನಾಥ್‌ (21) ಬಂಧಿತ ಆರೋಪಿ.

ಆರೋಪಿ ಮಂಜುನಾಥ್‌ ಸ್ಟೇಟ್‌ ಬ್ಯಾಂಕ್‌ – ಬೋಂದೆಲ್‌ ರೂಟ್‌ ಬಸ್‌ ನಲ್ಲಿ ಕಂಡಕ್ಟರ್‌ ಆಗಿದ್ದು, ಬಾಲಕಿಗೆ ತನ್ನ ಮೊಬೈಲ್‌ ನಂಬರ್‌ ನೀಡಿದ್ದ ಎಂದು ಬಾಲಕಿಯ ತಾಯಿ ಬೋಂದೆಲ್‌ನಲ್ಲಿ ಬಸ್ಸನ್ನು ತಡೆದು ನಿಲ್ಲಿಸಿ ಕಂಡೆಕ್ಟರ್‌ ಮಂಜುನಾಥ್‌ ನನ್ನು ಕೆಳಗಿಳಿಸಿ ತರಾಟೆಗೈಯ್ಯುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

8ನೇ ತರಗತಿ ಓದುತ್ತಿರುವ ಬಾಲಕಿ ಬಸ್‌ನಲ್ಲಿ ಪ್ರಯಾಣಿಸಿದ ಮೊದಲ ದಿನದಂದೇ ಕಂಡೆಕ್ಟರ್ ತನ್ನ ಮೊಬೈಲ್ ನಂಬರ್ ಕೊಟ್ಟಿದ್ದ ಎನ್ನಲಾಗಿದೆ. ಈ ಬಗ್ಗೆ ಬಾಲಕಿಯ ತಾಯಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!