Tuesday, May 21, 2024
Homeತಾಜಾ ಸುದ್ದಿಶಿವಮೊಗ್ಗ ಏರ್ ಪೋರ್ಟ್ ಗೆ ಯಡಿಯೂರಪ್ಪ ಹೆಸರಿಡುವ ವಿಚಾರ : ಬೇರೆ ಹೆಸರು ಪರಿಗಣಿಸುವಂತೆ ಸಿಎಂಗೆ...

ಶಿವಮೊಗ್ಗ ಏರ್ ಪೋರ್ಟ್ ಗೆ ಯಡಿಯೂರಪ್ಪ ಹೆಸರಿಡುವ ವಿಚಾರ : ಬೇರೆ ಹೆಸರು ಪರಿಗಣಿಸುವಂತೆ ಸಿಎಂಗೆ ಯಡಿಯೂರಪ್ಪ ಪತ್ರ

spot_img
- Advertisement -
- Advertisement -

ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೆಸರಿಡುವ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಬಿ.ಎಸ್. ಯಡಿಯೂರಪ್ಪ ಪತ್ರ ಬರೆದಿದ್ದಾರೆ. ‌

ರಾಷ್ಟ್ರದ ಅಭಿವೃದ್ಧಿ ಗೆ ಸೇವೆ ಸಲ್ಲಿಸಿದ ಅನೇಕ ಮಹನೀಯರು ದೇಶ ಭಕ್ತರು ಇದ್ದಾರೆ. ಅವರ ಕೊಡುಗೆಗೆ ಹೋಲಿಸಿದರೆ ನನ್ನದೊಂದು ಅಳಿಲು ಸೇವೆ ಮಾತ್ರ. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಕ್ಕೆ ನನ್ನ ಹೆಸರು ಸೂಕ್ತವಲ್ಲವೆಂದು ಭಾವಿಸುತ್ತೇನೆ ಎಂದು ಯಡಿಯೂರಪ್ಪ ಪತ್ರ ಬರೆದಿದ್ದಾರೆ.

ಅಲ್ಲದೇ ತಮ್ಮ ಹೆಸರಿಡುವ ನಿರ್ಧಾರವನ್ನು ಪುನರ್ ಪರಿಶೀಲಿಸಿ ಸೂಕ್ತ ವೇದಿಕೆಯಲ್ಲಿ ಚರ್ಚಿಸಿ ನಿರ್ಧಾರ ಮಾಡಿ ನಾಡಿನ ಇತಿಹಾಸಕ್ಕೆ ಕೊಡುಗೆ ನೀಡಿದ ಮಹನೀಯರ ಹೆಸರಿಡಿ ಎಂದು ಸಿಎಂ ಗೆ ಪತ್ರದ ಮೂಲಕ ಮಾಜಿ ಸಿಎ ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಕೆಲವು ದಿನಗಳ ಹಿಂದೆ ಶಿವಮೊಗ್ಗ ಜಿಲ್ಲಾ ಪ್ರವಾಸದ ವೇಳೆ ವಿಮಾನ ನಿಲ್ದಾ,ಣಕ್ಕೆ ಯಡಿಯೂರಪ್ಪ ಹೆಸರಿಡುವ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

- Advertisement -
spot_img

Latest News

error: Content is protected !!