Thursday, June 4, 2026
Homeತಾಜಾ ಸುದ್ದಿರಾಜ್ಯಾದ್ಯಂತ ಎಲ್ಲಾ ದೇವಾಲಯಗಳ ಮೇಲೆ ಮೈಕ್ ಹಾಕ್ತಿವಿ - ಪ್ರಮೋದ್ ಮುತಾಲಿಕ್

ರಾಜ್ಯಾದ್ಯಂತ ಎಲ್ಲಾ ದೇವಾಲಯಗಳ ಮೇಲೆ ಮೈಕ್ ಹಾಕ್ತಿವಿ – ಪ್ರಮೋದ್ ಮುತಾಲಿಕ್

- Advertisement -
- Advertisement -

ಬೆಂಗಳೂರು: ಕಳೆದ 6 ತಿಂಗಳಿನಿಂದ ಆಜಾನ್ ಮೈಕ್ ನಿಂದ ಆಗುತ್ತಿದ್ದ ತೊಂದರೆ ತಡೆಗಟ್ಟಲು ಸರ್ಕಾರ, ತಹಶೀಲ್ದಾರ್, ಶಬ್ದಮಾಲಿನ್ಯ ಮಂಡಳಿಗೆ ಮನವಿ ಕೊಟ್ಟಿದ್ದೆವು ಎಂದು ಶ್ರೀ ರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.


ಮೇ 9ರಂದು ರಾಜ್ಯಾದ್ಯಂತ ಎಲ್ಲಾ ದೇವಾಲಯಗಳ ಮೇಲೆ ಮೈಕ್ ಹಾಕ್ತಿವಿ. ಭಜನೆ ಪಠಣ, ಹನುಮಾನ್ ಚಾಲೀಸ್ ಹಾಡ್ತೀವಿ. ಪಿ ಎಫ್ ಐಗೆ ಶ್ರೀರಾಮ ಸೇನೆ ವಿಶ್ವ ಹಿಂದೂಪರಿಷತ್ ಹೋಲಿಕೆ ಮಾಡೋದು ದೊಡ್ಡ ತಪ್ಪು. ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ರೀತಿ ಹೇಳಿಕೆ ಸರಿಯಲ್ಲ.


ಶ್ರೀರಾಮಸೇನೆ ಭಜರಂಗದಳ ದೇಶಭಕ್ತ ಸಂಘಟನೆ. ವೀರ ಸಾರ್ವಕರ್ ಮಹಾನ್ ವ್ಯಕ್ತಿ, ಮಹಾನ್ ಪುರುಷ. ತನ್ನ ಆಯುಷ್ಯದಲ್ಲಿ 23 ವರ್ಷ ಜೈಲಲ್ಲಿ ಕಳೆದವರು. ಸಾವರ್ಕರ್ ಜೈಲಿನಿಂದ ಬ್ರಿಟಿಷರಿಗೆ ಪತ್ರ ಬರೆದಿದ್ದು ನಿಜಾ ಅದರಲ್ಲಿ ತಪ್ಪೇನಿದೆ. ಹಾಗೆ ಸಾವರ್ಕರ್ ಬ್ರಿಟಿಷರಿಗೆ ಶರಣಾಗಿ ದೇಶದ್ರೋಹ ಕೆಲಸವೇನು ಮಾಡಿಲ್ಲ ಎಂದು ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.

- Advertisement -

Latest News

error: Content is protected !!