- Advertisement -
![]()
- Advertisement -
ಮಂಗಳೂರು: ನಗರದಲ್ಲಿ ಪಾರ್ಕಿಂಗ್ ಮಾಡಿದ್ದ ರಿಕ್ಷಾವನ್ನು ಕಳ್ಳತನ ಮಾಡಿರುವ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಲ್ಲದೇ ರಿಕ್ಷಾವನ್ನು ಹುಡುಕಿ ಕೊಡುವಂತೆ ವಿಡಿಯೋ ಸಂದೇಶದ ಮೂಲಕ ಚಾಲಕ ಮನವಿ ಮಾಡಿದ್ದಾರೆ.
ರಾಮಚಂದ್ರ ಎಂಬುವವರು ತಮ್ಮ KA19AB6333 ನೋಂದಣಿಯ ರಿಕ್ಷಾವನ್ನು ಸಂಬಂಧಿಕರ ಮನೆಯ ಭೂತ ಕಾರ್ಯಕ್ಕೆ ಎಂದು ಹೋಗುವ ಸಂದರ್ಭದಲ್ಲಿ ಮಂಗಳೂರಿನ ಪಾಂಡೇಶ್ವರದ ಓಲ್ಡ್ ಕೆಂಟ್ ರಸ್ತೆ ಬಳಿ ಸಂಜೆ 7.20ರ ಹೊತ್ತಿಗೆ ಪಾರ್ಕ್ ಮಾಡಿದ್ದ ಒಂದು ಗಂಟೆಯ ಒಳಗೆ ನಾಪತ್ತೆಯಾಗಿದೆ.
ಈ ಬಗ್ಗೆ ಯಾರಿಗಾದರೂ ಸುಳಿವು ಸಿಕ್ಕಿದಲ್ಲಿ ಕರೆ ಮಾಡಿ ತಿಳಿಸಲು ಆಟೊ ರಿಕ್ಷಾ ಚಾಲಕ ಎಂಬವರು ಮನವಿ ಮಾಡಿದ್ದಾರೆ. ತಾನು ಆಟೋರಿಕ್ಷಾದಿಂದಲೇ ಜೀವನ ನಿರ್ವಹಿಸಬೇಕಾಗಿದ್ದು, ಬದುಕು ಕಷ್ಟಕರವಾಗಿದೆ. ಆದ್ದರಿಂದ ಆಟೋರಿಕ್ಷಾ ಹುಡುಕಿ ಕೊಡಲು ನೆರವಾಗಿ ಎಂದು ಅವರು ಮನವಿ ಮಾಡಿದ್ದಾರೆ.
ಈ ಬಗ್ಗೆ ಅವರು ಪೊಲೀಸ್ ಠಾಣೆಯಲ್ಲಿ ದೂರು ಕೂಡಾ ನೀಡಿದ್ದಾರೆ.
- Advertisement -


