Saturday, June 6, 2026
Homeಕರಾವಳಿಬೆಂಗಳೂರಿನಿಂದ ಮನೆಗೆ ಬರುತ್ತಿದ್ದ ಯುವಕ ಪುತ್ತೂರು ತಲುಪುತ್ತಿದ್ದಂತೆ ಹೃದಯಾಘಾತದಿಂದ ನಿಧನ

ಬೆಂಗಳೂರಿನಿಂದ ಮನೆಗೆ ಬರುತ್ತಿದ್ದ ಯುವಕ ಪುತ್ತೂರು ತಲುಪುತ್ತಿದ್ದಂತೆ ಹೃದಯಾಘಾತದಿಂದ ನಿಧನ

- Advertisement -
- Advertisement -

ಪುತ್ತೂರು ಬೆಂಗಳೂರಿನಿಂದ ಈಶ್ವರಮಂಗಲದ ತನ್ನ ಮನೆಗೆ ಬರುತ್ತಿದ್ದ ಯುವಕನೊಬ್ಬ ಪುತ್ತೂರು ತಲುಪುತ್ತಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಈಶ್ವರಮಂಗಲದ ಪಾಳ್ಯತಡ್ಕದ ನಿವಾಸಿ ಉಮ್ಮರ್ ಸಿ ಹೆಚ್ ಎಂಬ ಯುವಕ ಬೆಂಗಳೂರಿನಲ್ಲಿ ತನ್ನ ಅಣ್ಣನ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ. ನಿನ್ನೆ ಬೆಂಗಳೂರಿನಿಂದ ಬಸ್ ಮೂಲಕ ಈಶ್ಮವರಮಂಗಲದ ತನ್ನ ಮನೆಗೆ ಹೊರಟಿದ್ದ. ಅದರಂತೆ ಇಂದು ಬೆಳಗ್ಗೆ ಪುತ್ತೂರು ತಲುಪುತ್ತಿದ್ದಂತೆ ಬಸ್ ನಿಂದ ಇಳಿದ ಉಮ್ಮರ್ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಅಷ್ಟರಲ್ಲಾಗಲೇ ಉಮ್ಮರ್ ಹೃದಯಾಘಾತದಿಂದ ಉಮ್ಮರ್ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

- Advertisement -

Latest News

error: Content is protected !!