Saturday, June 6, 2026
Homeಅಪರಾಧಪುತ್ತೂರಿನ ಪ್ರತಿಷ್ಠಿತ ಬೋರೆವೆಲ್ ಸಂಸ್ಥೆಯ ಮಾಲಕಿಗೆ ಕಾಲ್ ಮಾಡಿ, ಬ್ಲ್ಯಾಕ್ ಮೇಲ್; ಮಹಿಳಾ ಠಾಣೆಯಲ್ಲಿ ದೂರು...

ಪುತ್ತೂರಿನ ಪ್ರತಿಷ್ಠಿತ ಬೋರೆವೆಲ್ ಸಂಸ್ಥೆಯ ಮಾಲಕಿಗೆ ಕಾಲ್ ಮಾಡಿ, ಬ್ಲ್ಯಾಕ್ ಮೇಲ್; ಮಹಿಳಾ ಠಾಣೆಯಲ್ಲಿ ದೂರು ದಾಖಲು

- Advertisement -
- Advertisement -

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬೋರ್‌ವೆಲ್ ಸಂಸ್ಥೆಯ ಮಾಲಕಿಗೆ ಯುವಕನೋರ್ವ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಣಕ್ಕೆ ಬೇಡಿಕೆ ಇಟ್ಟು ಬೆದರಿಕೆ ಒಡ್ಡಿರುವ ಬಗ್ಗೆ ನೀಡಿದ ದೂರಿನಂತೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ಪುತ್ತೂರು ಬ್ರಹ್ಮರಥೋತ್ಸವದ ಪ್ರಯುಕ್ತ ಪುತ್ತೂರಿನ ಬೋರ್‌ವೆಲ್ ಸಂಸ್ಥೆಯೊಂದರ ವತಿಯಿಂದ ರಥಬೀದಿ ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಿತ್ತು. ಸಂಸ್ಥೆಯ ಮಾಲಕಿ ಕೂಡಾ ಅಲ್ಲೇ ಕೆಲಸದಲ್ಲಿ ನಿರತರಾಗಿದ್ದವೇಳೆ ಕೌಡಿಚ್ಚಾರ್ ನ ನಿತೇಶ್ ಎಂಬುವವರು ಮೊಬೈಲ್ ಗೆ ಕರೆ ಮಾಡಿ ಹಣದ ಬೇಡಿಕೆ ಇಟ್ಟದ್ದಲ್ಲದೇ ತುಳು ಭಾಷೆಯಲ್ಲಿ ಅವಾಚ್ಯ ಶಬ್ದಗಳನ್ನು ಬಳಸಿ ನಿಂದನೆ ಮಾಡಿದ ಪರಿಣಾಮವಾಗಿ ಮಾನಸಿಕ ಖಿನ್ನತೆಗೆ ಒಳಗಾಗಿರುವ ಸಂಸ್ಥೆಯ ಮಾಲಕಿ ನ್ಯಾಯ ಕೋರಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಕೇಸು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

- Advertisement -

Latest News

error: Content is protected !!