Saturday, June 6, 2026
Homeಕರಾವಳಿಉಡುಪಿಬಿಜೆಪಿ ಹಿಂದೂ ನಾಯಕರನ್ನು ದಮನಿಸಲು ನೋಡಿದರೆ ತಕ್ಕ ಉತ್ತರ ಸಮಾಜ ನೀಡುತ್ತೆ: ಪ್ರಮೋದ್ ಮುತಾಲಿಕ್

ಬಿಜೆಪಿ ಹಿಂದೂ ನಾಯಕರನ್ನು ದಮನಿಸಲು ನೋಡಿದರೆ ತಕ್ಕ ಉತ್ತರ ಸಮಾಜ ನೀಡುತ್ತೆ: ಪ್ರಮೋದ್ ಮುತಾಲಿಕ್

- Advertisement -
- Advertisement -

ಉಡುಪಿ: ತೊಗಾಡಿಯಾ ಅವರನ್ನು ನಿಷೇಧಿಸಿದಾಗ ಈಶ್ವರಪ್ಪ ಸದನದಲ್ಲಿ ಪ್ರಶ್ನಿಸಿದ್ದರು .ಈಗ ಅದೇ ಸರ್ಕಾರ ನನ್ನನ್ನು ಉಡುಪಿಗೆ ಬಾರದಂತೆ ನಿಷೇಧಿಸಿದೆ. ಬಿಜೆಪಿ ಹಿಂದೂ ನಾಯಕರನ್ನು ದಮನಿಸಲು ನೋಡಿದರೆ ತಕ್ಕ ಉತ್ತರವನ್ನು ಸಮಾಜ ನೀಡುತ್ತದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ನನ್ನನ್ನು ನಿಷೇಧಿಸುವ ಈ ನಡೆಯಿಂದ ಬಿಜೆಪಿಗೆ ಮುಂದೆ ತೊಂದರೆ ಆಗುತ್ತದೆ. ಕಲ್ಲಂಗಡಿ ಹಣ್ಣು ಒಡೆದವರ ಮೇಲೆ 6 ಸೆಕ್ಷನ್ ಹಾಕಲಾಗಿದೆ. ನೀವು ತಿದ್ದುಕೊಳ್ಳದೆ ಹೋದರೆ ನಿಮಗೆ ಅನಾಹುತ ಆಗುತ್ತೆ ಎಂದು ಹೇಳಿದರು.

ಗಂಗೊಳ್ಳಿ ಇಡೀ ರಾಜ್ಯಕ್ಕೆ ಜಾಗೃತಿಯ ಸಂದೇಶ ಕೊಟ್ಟ ಪ್ರದೇಶ. ಇಲ್ಲಿ ಮೀನುಗಾರರಿಗೆ ನಿಷೇಧ ಹೇರಿದ ಕಾರಣ ರಾಜ್ಯಾದ್ಯಂತ ವ್ಯಾಪಾರ ಅಸಹಕಾರ ಚಳುವಳಿ ಆರಂಭವಾಯಿತು .ಮುಸ್ಲಿಂ ಬಾಹುಳ್ಯ ಊರುಗಳು ಸೂಕ್ಷ್ಮ ಪ್ರದೇಶ ಆಗುತ್ತಿವೆ.ಇದು ಸಮಾಜಕ್ಕೆ ದೊಡ್ಡ ಗಂಡಾತರ ತಂದಿಡಲಿದೆ. ಸರ್ಕಾರ ಆ ಗಲಭೆಕೋರರ ಮನೋಬಲ ಹೆಚ್ಚಿಸುತ್ತಿದೆ ಎಂದು ಹೇಳಿದ್ದಾರೆ.

ಪಿಎಫ್ ಐ ನಿಷೇಧಿಸಬೇಕು ಎಂದು ವಿರೋಧ ಪಕ್ಷದಲ್ಲಿದ್ದಾಗ ಬಿಜೆಪಿ ಪಟ್ಟು ಹಿಡಿದಿತ್ತು. ಆದರೆ ಈಗ ಪಿ ಎಫ್ ಐ ನಿಷೇಧಕ್ಕೆ ದಾಖಲೆಯ ಕೊರತೆಯಿದೆ ಎಂದು ಸಬೂಬು ಹೇಳುತ್ತಿದೆ. ಪಿಎಫ್ ಐ  ನಿಷೇಧಿಸದೇ ಹೋದರೆ ರಾಜ್ಯವ್ಯಾಪಿ ಹೋರಾಟ ನಡೆಸುತ್ತೇವೆ ಎಂದು ಹೇಳಿದ್ದಾರೆ.

- Advertisement -

Latest News

error: Content is protected !!