Monday, June 15, 2026
Homeಕರಾವಳಿಉಡುಪಿಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ: ಚುರುಕುಗೊಂಡ ಪೊಲೀಸ್ ತನಿಖೆ

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ: ಚುರುಕುಗೊಂಡ ಪೊಲೀಸ್ ತನಿಖೆ

- Advertisement -
- Advertisement -

ಉಡುಪಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ವಿವಿಧ ಜಿಲ್ಲೆಗಳಿಗೆ ತೆರಳಿ ಈಗಾಗಲೇ ತನಿಖಾ ತಂಡಗಳು ತನಿಖೆಯನ್ನು ಆರಂಭಿಸಿದೆ.

ಚಿಕ್ಕಮಗಳೂರು ಬೆಂಗಳೂರಿಗೆ ತೆರಳುತ್ತಿರುವ ಮಣಿಪಾಲ್ ಇನ್ ಸ್ಪೆಕ್ಟರ್ ನೇತೃತ್ವದ ಪೊಲೀಸ್ ತಂಡ ತೆರಳಿದ್ರೆ, ದಾವಣಗೆರೆಗೆ ಉಡುಪಿ ನಗರ ಪೊಲೀಸರು ತೆರಳಿದ್ದಾರೆ. ಇನ್ನು ಮಲ್ಪೆ, ಬ್ರಹ್ಮಾವರ ಸರ್ಕಲ್ ಇನ್ ಸ್ಪೆಕ್ಟರ್ ಮತ್ತು ತಂಡ ಬೆಳಗಾವಿಗೆ ತೆರಳಿ ತನಿಖೆ ನಡೆಸುತ್ತಿದೆ.

ಪೊಲೀಸ್ ವರಿಷ್ಟಾಧಿಕಾರಿ ವಿಷ್ಣುವರ್ಧನ್ ಅವರ ನೇತೃತ್ವದಲ್ಲಿ ಈ ತನಿಖಾ ತಂಡವನ್ನು ರಚಿಸಲಾಗಿದ್ದು, ಸಂತೋಷ್ ಪಾಟೀಲ್ ಮತ್ತು ಗೆಳೆಯರು ಓಡಾಡಿದಲ್ಲೆಲ್ಲಾ ಪೊಲೀಸರು ಮಹಜರು ಮಾಡುತ್ತಿದ್ದಾರೆ.

- Advertisement -

Latest News

error: Content is protected !!