Monday, June 15, 2026
Homeಕರಾವಳಿಭಾರೀ ಗಾಳಿ-ಮಳೆಗೆ ಪುತ್ತೂರು ಜಾತ್ರೆಯ ಪ್ರಯುಕ್ತ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮ ರದ್ದು

ಭಾರೀ ಗಾಳಿ-ಮಳೆಗೆ ಪುತ್ತೂರು ಜಾತ್ರೆಯ ಪ್ರಯುಕ್ತ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮ ರದ್ದು

- Advertisement -
- Advertisement -

ಪುತ್ತೂರು: ಭಾರೀ ಗಾಳಿ – ಮಳೆಯಿಂದಾಗಿ ಪುತ್ತೂರು ಜಾತ್ರೆಗೆ ದೇವಳದ ಗದ್ದೆಯ ಎದುರು ಭಾಗದ ಶ್ರೀ ಶಿವಪಾರ್ವತಿ ಸಾಂಸ್ಕೃತಿಕ ವೇದಿಕೆಯಲ್ಲಿ ನಡೆದ ಕಾರ್ಯಕ್ರಮವನ್ನು ಮುನ್ನೆಚ್ಚರಿಕೆಯಿಂದ ತಾತ್ಕಾಲಿಕವಾಗಿ ರದ್ದು ಪಡಿಸಲಾಯಿತು.

ಗುಡುಗಿನ ಆರ್ಭಟ ಮತ್ತು ಗಾಳಿಗೆ ವೇದಿಕೆ ಸುತ್ತಮುತ್ತ ಮಳೆ ನೀರು ಸೋರುತ್ತಿದ್ದು ತಕ್ಷಣ ಗ್ರೀನ್ ರೂಮ್ ನಲ್ಲಿದ್ದ ಕಲಾವಿದರನ್ನು ಸಭಾಂಗಣಕ್ಕೆ ಕಳುಹಿಸಿಕೊಡುವ ಕೆಲಸವನ್ನು ಸಾಂಸ್ಕೃತಿಕ ಕಾರ್ಯಕ್ರಮದ ಉಪಸಮಿತಿಯವರು ಮಾಡಿದರು. ಪ್ರೇಕ್ಷರು ಮತ್ತು ಕಲಾವಿದರು ಗಾಳಿ ಮಳೆಗೆ ವೇದಿಕೆಯ ಸಭಾಂಗಣದಲ್ಲಿ ಆಶ್ರಯ ಪಡೆದರು.

- Advertisement -

Latest News

error: Content is protected !!