Sunday, June 7, 2026
Homeತಾಜಾ ಸುದ್ದಿಜೆಡಿಎಸ್ ಪಕ್ಷವು ಸ್ವತಂತ್ರ ಸರ್ಕಾರವಾಗಿ ಅಸ್ಥಿತ್ವಕ್ಕೆ ಬಂದರೆ ಎಲ್ಲಾ ಯೋಜನೆಯನ್ನು ಸಕಾರಗೊಳಿಸಲಾಗುವುದು: ಹೆಚ್.ಡಿ.ಕೆ

ಜೆಡಿಎಸ್ ಪಕ್ಷವು ಸ್ವತಂತ್ರ ಸರ್ಕಾರವಾಗಿ ಅಸ್ಥಿತ್ವಕ್ಕೆ ಬಂದರೆ ಎಲ್ಲಾ ಯೋಜನೆಯನ್ನು ಸಕಾರಗೊಳಿಸಲಾಗುವುದು: ಹೆಚ್.ಡಿ.ಕೆ

- Advertisement -
- Advertisement -

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಸ್ವತಂತ್ರ ಸರ್ಕಾರವಾಗಿ ಅಸ್ಥಿತ್ವಕ್ಕೆ ಬಂದರೆ, ಪ್ರತಿ ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ಕೆಲಸ, ಸೂರಿಲ್ಲದವರಿಗೆ ಮನೆ, ವಯೋವೃದ್ಧರಿಗೆ ಮಾಸಿಕ ಪಿಂಚಣಿ ರೂಪದಲ್ಲಿ ತಲಾ 5 ಸಾವಿರ ನೆರವು, ಪ್ರತಿ ಮಹಿಳೆಯರು ಸ್ವತಂತ್ರವಾಗಿ ಜೀವನ ನಡೆಸಲು ಗೌರವಧನ ನೀಡುವಂತ ಯೋಜನೆಯನ್ನು ಜಾರಿಗೆ ತರಲಾಗುತ್ತದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಬಿಜೆಪಿ ಸರ್ಕಾರ ಜನತೆ ತೆರಿಗೆ ಹಣವನ್ನು ಲೂಟಿ ಮಾಡುತ್ತಿದ್ದು, ಈ ಮೂಲಕ ಜನರನ್ನು ವಂಚಿಸುತ್ತಿದೆ. ಕೇಂದ್ರ ಸರ್ಕಾರ ತಮಿಳುನಾಡು, ಆಂಧ್ರಕ್ಕೆ ತೋರುವ ಪ್ರಾತಿನಿಧ್ಯವನ್ನು ಕರ್ನಾಟಕಕ್ಕೆ ತೋರುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಇನ್ನು ಜೆಡಿಎಸ್ ಪಕ್ಷದಿಂದ ಹಲವು ಜನಪರ ಯೋಜನೆಗಳನ್ನು ಯೋಜಿಸಲಾಗಿದ್ದು, ಉತ್ತಮ ಗುಣಮಟ್ಟದ ಶಿಕ್ಷಣ, ವಸತಿ, ಉದ್ಯೋಗ ಸೇರಿದಂತೆ ಹಲವು ಮಹತ್ವದ ಉದ್ದೇಶವನ್ನು ಹೊಂದಿದ್ದು, ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಗೆದ್ದು ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ ಎಲ್ಲಾ ಯೋಜನೆಯನ್ನು ಸಕಾರಗೊಳಿಸಲಾಗುವುದು ಎಂದು ಹೇಳಿದ್ದಾರೆ.

- Advertisement -

Latest News

error: Content is protected !!