Saturday, June 6, 2026
Homeಕರಾವಳಿಕೇರಳದಲ್ಲೊಂದು ನೀಚ ಕೃತ್ಯ: ಲೈಂಗಿಕ ದೌರ್ಜನ್ಯವೆಸಗಿ ತುಂಬು ಗರ್ಭಿಣಿ ಮೇಕೆಯನ್ನು ಕೊಂದ ಪಾಪಿಗಳು

ಕೇರಳದಲ್ಲೊಂದು ನೀಚ ಕೃತ್ಯ: ಲೈಂಗಿಕ ದೌರ್ಜನ್ಯವೆಸಗಿ ತುಂಬು ಗರ್ಭಿಣಿ ಮೇಕೆಯನ್ನು ಕೊಂದ ಪಾಪಿಗಳು

- Advertisement -
- Advertisement -

ಕೇರಳ: ದೇವರನಾಡೆಂದು ಕರೆಸಿಕೊಳ್ಳುವ ಕೇರಳದಲ್ಲಿ ಮನುಕುಲವೇ ತಲೆ ತಗ್ಗಿಸುವಂತಹ ಘಟನೆಯೊಂದು ನಡೆದಿದೆ.  ಕೇರಳದ ಕಾಞಂಗಾಡು ಪೇಟೆಯಲ್ಲಿ ಮೂವರು ವಿಕೃತಕಾಮಿಗಳು ತುಂಬು ಗರ್ಭಿಣಿ ಮೇಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಂದು ಹಾಕಿದ್ದಾರೆ.

ಕೊಟ್ಟಚೇರಿಯ ಎಲೈಟ್ ಹೋಟೆಲ್ ಗೆ ಸೇರಿದ ನಾಲ್ಕು ತಿಂಗಳ ಗರ್ಭಿಣಿ ಮೇಕೆಯ ಮೇಲೆ ಪಾಪಿಗಳು ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಈ ಸಂಬಂಧ ಹೊಟೇಲ್‌ ಉದ್ಯೋಗಿ ಸೆಂಥಿಲ್‌ ಎಂಬಾತನನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ಇತರ ಇಬ್ಬರು ವ್ಯಕ್ತಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಧ್ಯಾಹ್ನ ರಾತ್ರಿ 1.30ರ ಸುಮಾರಿಗೆ ಹೊಟೇಲ್‌ನ ನೌಕರರಿಗೆ ಹಿತ್ತಲಿನಲ್ಲಿ ಎರಡು ಮೇಕೆಗಳ ಗಲಾಟೆ ಸದ್ದು ಕೇಳಿಸಿದೆ. ತಕ್ಷಣ ಸ್ಥಳಕ್ಕೆ ಬಂದು ನೋಡಿದಾಗ, ಮೂವರು ಪುರುಷರು ಗೋಡೆ ಹಾರಿ ಪರಾರಿಯಾಗುವುದನ್ನು ನೋಡಿದ್ದಾರೆ ಮತ್ತು ಸೆಂಥಿಲ್‌ನನ್ನು ಹಿಡಿದಿದ್ದಾರೆ. ಈ ವೇಳೆ ಗರ್ಭಿಣಿ ಮೇಕೆ ಸತ್ತಿರುವುದು ಅವರ ಗಮನಕ್ಕೆ ಬಂದಿದೆ. ಅಲ್ಲದೆ ಮೇಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಕಂಡುಬಂದಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಸೆಂಥಿಲ್ ನನ್ನು ವಶಕ್ಕೆ ಪಡೆದಿದ್ದಾರೆ.

- Advertisement -

Latest News

error: Content is protected !!