Monday, June 30, 2025
Homeಕರಾವಳಿಬೆಂಗಳೂರಿನಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವಿಟ್ಲದ ಕುಖ್ಯಾತ ಆರೋಪಿ ಅಂದರ್

ಬೆಂಗಳೂರಿನಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವಿಟ್ಲದ ಕುಖ್ಯಾತ ಆರೋಪಿ ಅಂದರ್

spot_img
- Advertisement -
- Advertisement -

ಬೆಂಗಳೂರು:  ಸಿಲಿಕಾನ್ ಸಿಟಿಯಲ್ಲಿ ಎಂಡಿಎಂ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಕುಖ್ಯಾತ ರೌಡಿಶೀಟರ್ ಸೇರಿ ಇಬ್ಬರು ದಂಧೆಕೋರರನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರಿನ ವಿಟ್ಲ ಮೂಲದ ಹಸನ್ ಸಾದಿಕ್, ಬೆನ್ಸನ್ ಟೌನ್ ನಿವಾಸಿ ತಲ್ಲಾಖಾನ್ ಬಂಧಿತರು. ಬಂಧಿತರಿಂದ 23 ಗ್ರಾಂ ಎಂಡಿಎಂ ಡ್ರಗ್ಸ್,  ಒಂದು ರಾಯಲ್ ಎನ್ ಫೀಲ್ಡ್ ಜಪ್ತಿ ಮಾಡಿಕೊಂಡಿದ್ದಾರೆ.

ಇತ್ತೀಚೆಗೆ ಹೆಬ್ಬಾಳ ನಾಗೇನಹಳ್ಳಿ ಬಳಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಮಾಹಿತಿ‌ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ  ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ, ಉಪ್ಪಿನಂಗಡಿ, ಪುತ್ತೂರು ಗ್ರಾಮಾಂತರ ಸೇರಿದಂತೆ ಆರೋಪಿ ವಿರುದ್ಧ ಕೊಲೆ ಯತ್ನ, ದೊಂಬಿ, ಅಪಹರಣ, ಕೊಲೆ ಬೆದರಿಕೆ ಸೇರಿದಂತೆ‌ 17 ಪ್ರಕರಣ ದಾಖಲಾಗಿವೆ ಎಂಬುವುದು ಬಯಲಾಗಿದೆ.

ಆರೋಪಿಯು ಜೀವನಕ್ಕಾಗಿ ಬೆಂಗಳೂರಿಗೆ ಮೂರು ತಿಂಗಳ ಹಿಂದಷ್ಟೇ ಬಂದು ಕಾರು ಮಾರಾಟ ಮಾಡುವ ಕೆಲಸ ಮಾಡುತ್ತಿದ್ದ.‌ ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಸಂಪಾದನೆ ಮಾಡುವುದಕ್ಕಾಗಿ ಪರಿಚಯಸ್ಥರಿಂದ ಎಂಡಿಎಂ ಡ್ರಗ್ಸ್ ಖರೀದಿಸಿ ಮಾರಾಟಕ್ಕೆ ಯತ್ನಿಸುತ್ತಿದ್ದರು. ಈ ಸಂಬಂದ ಇಬ್ಬರನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ.

- Advertisement -
spot_img

Latest News

error: Content is protected !!