Saturday, June 6, 2026
Homeಕರಾವಳಿಉದ್ಯಮಿ ಆರ್.ಎನ್. ನಾಯಕ್ ಹತ್ಯೆ ಪ್ರಕರಣ: ಭೂಗತ ಪಾತಕಿ ಬನ್ನಂಜೆ ರಾಜಾ ವಿರುದ್ಧದ ಆರೋಪ ಸಾಬೀತು

ಉದ್ಯಮಿ ಆರ್.ಎನ್. ನಾಯಕ್ ಹತ್ಯೆ ಪ್ರಕರಣ: ಭೂಗತ ಪಾತಕಿ ಬನ್ನಂಜೆ ರಾಜಾ ವಿರುದ್ಧದ ಆರೋಪ ಸಾಬೀತು

- Advertisement -
- Advertisement -

ಬೆಳಗಾವಿ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಡೆದಿದ್ದ ಉದ್ಯಮಿ ಆರ್.ಎನ್. ನಾಯಕ್ ಹತ್ಯೆ ಪ್ರಕರಣದಲ್ಲಿ ಭೂಗತ ಪಾತಕಿ ಬನ್ನಂಜೆ ರಾಜಾ ವಿರುದ್ಧದ ಆರೋಪ ಸಾಬೀತಾಗಿದೆ. ಬನ್ನಂಜೆ ರಾಜಾ ಸೇರಿ 9 ಆರೋಪಿಗಳು ದೋಷಿ ಎಂದು ಸಾಬೀತಾಗಿದೆ.‌

ಬೆಳಗಾವಿ ಕೋಕಾ ನ್ಯಾಯಾಲಯ ನ್ಯಾಯಾಧೀಶ ಸಿ.ಎಂ. ಜೋಶಿ ಇಂದು ತೀರ್ಪು ನೀಡಿದ್ದು, ಏಪ್ರಿಲ್ 4 ರಂದು ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ. ಪ್ರಕರಣದಲ್ಲಿನ 6, 11 ಹಾಗೂ  16 ನೇ ಆರೋಪಿಗಳು ನಿರ್ದೋಷಿಗಳು ಎಂದು ತೀರ್ಪು ನೀಡಲಾಗಿದೆ.

ರಾಜ್ಯದ ಮೊದಲ ಕೋಕಾ ಪ್ರಕರಣದ ತೀರ್ಪು ಇಂದು ಹೊರಬಿದ್ದಿದ್ದು ನ್ಯಾಯಾಧೀಶ ಸಿ.ಎಂ. ಜೋಶಿ ತೀರ್ಪು ನೀಡಿದ್ದಾರೆ. ಭದ್ರತೆ ಕಾರಣಕ್ಕೆ ಬೆಳಗಾವಿಯ ಹಿಂಡಲಗಾ ಜೈಲಿನಿಂದಲೇ ಅನ್ ಲೈನ್ ಮೂಲಕ ಅರೋಪಿತರು ಕೋರ್ಟ್ ಗೆ ಹಾಜರಾಗಿದ್ದರು.

- Advertisement -

Latest News

error: Content is protected !!