Friday, June 5, 2026
Homeಕರಾವಳಿಸಂಪೂರ್ಣ ಕೇಸರಿಮಯವಾಗಿದ್ದ ಮಂಗಳೂರು ವಿವಿ ಕಾರ್ಯಕ್ರಮ

ಸಂಪೂರ್ಣ ಕೇಸರಿಮಯವಾಗಿದ್ದ ಮಂಗಳೂರು ವಿವಿ ಕಾರ್ಯಕ್ರಮ

- Advertisement -
- Advertisement -

ಮಂಗಳೂರು: ಸಿಎಫ್‌ ಐ ಪ್ರತಿಭಟನೆಯ ನಡುವೆಯೂ, ಮಂಗಳೂರು ವಿವಿಯ ವಿದ್ಯಾರ್ಥಿ ಪರಿಷತ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಪಾಲ್ಗೊಂಡಿದ್ರು. ಈ ವೇಳೆ ವಿವಿಯ ಬಹುತೇಕ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗಮನ ಸೆಳೆದರು. ವೇದಿಕೆಯಲ್ಲೂ ಪ್ರಭಾಕರ ಭಟ್ ಜೊತೆ  ಕೇಸರಿ ಶಾಲು ಧರಿಸಿ ವಿದ್ಯಾರ್ಥಿ ಸಂಘದ ನಾಯಕರು ಭಾಗಿಯಾದ್ರು.  

ಕಾರ್ಯಕ್ರಮದ ಆರಂಭಕ್ಕೂ ಮುನ್ನ ಪ್ರಭಾಕರ ಭಟ್ ವಿರುದ್ದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಮಂಗಳೂರು ವಿವಿ ಕಾರ್ಯಕ್ರಮಕ್ಕೆ ಆರ್ ಎಸ್ ಎಸ್ ಮುಖಂಡ ಕಲ್ಕಡ್ಕ ‌ಭಟ್ ಅತಿಥಿ ವಿಚಾರಕ್ಕೆ ಸಂಬಂಧಿಸಿ ಸಿಎಫ್ ಐ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ‌ನಡೆಸಿತ್ತು.  ಇದಕ್ಕೆ ವಿರೋಧ ವ್ಯಕ್ತಪಡಿಸಿ ಮಂಗಳೂರು ವಿವಿಯ ಬಹುತೇಕ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ್ರು. ಹೀಗಾಗಿ ಮಂಗಳೂರು ವಿವಿ ಕಾರ್ಯಕ್ರಮ ಸಂಪೂರ್ಣ ಕೇಸರಿ ಮಯವಾಗಿತ್ತು.

- Advertisement -

Latest News

error: Content is protected !!