Thursday, June 4, 2026
Homeತಾಜಾ ಸುದ್ದಿಕುಡಿದು ತಾಯಿಗೆ ಹಲ್ಲೆ ಮಾಡುತ್ತಿದ್ದ ತಂದೆಯನ್ನೇ ಕೊಂದ ಮಗ

ಕುಡಿದು ತಾಯಿಗೆ ಹಲ್ಲೆ ಮಾಡುತ್ತಿದ್ದ ತಂದೆಯನ್ನೇ ಕೊಂದ ಮಗ

- Advertisement -
- Advertisement -

ಮುಂಬೈನ ಚಾವ್ಲ್​ ಎಂಬಲ್ಲಿ ಮನೆಗೆ ಕುಡಿದು ಬಂದು, ದಿನವೂ ತನ್ನ ತಾಯಿಗೆ ಹೊಡೆಯುತ್ತಿದ್ದ ಅಪ್ಪನನ್ನು ಮಗನೇ ಕೊಲೆ ಮಾಡಿರುವ ಘಟನೆ ನಡೆದಿದೆ.

46 ವರ್ಷದ ತಂದೆಯನ್ನು ಅವರ 16 ವರ್ಷದ ಮಗ ಕೊಲೆ ಮಾಡಿದ್ದಾನೆ. ಕುಡಿದ ಮತ್ತಿನಲ್ಲಿ ತನ್ನ ತಾಯಿಯ ಮೇಲೆ ಅಪ್ಪ ಹಲ್ಲೆ ನಡೆಸುತ್ತಿರುವುದನ್ನು ಕಂಡ ಯುವಕ ಕೋಪಗೊಂಡು ಈ ಕೃತ್ಯ ಎಸಗಿದ್ದಾನೆ.

ಈ ಪ್ರಕರಣದ ಬಗ್ಗೆ ದೂರು ನೀಡಿರುವ ಹೆಂಡತಿ ಹಲವಾರು ವರ್ಷಗಳಿಂದ ನನ್ನ ಗಂಡ ನಮ್ಮ ಇಬ್ಬರು ಗಂಡು ಮಕ್ಕಳ ಎದುರು ನನಗೆ ಹೊಡೆದು, ಕಿರುಕುಳವನ್ನು ನೀಡುತ್ತಿದ್ದರು. ಇದನ್ನು ಕಂಡು ಬೇಸತ್ತಿದ್ದ ಮಗ ನನ್ನ ಗಂಡನನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

- Advertisement -

Latest News

error: Content is protected !!